ಕನ್ನಡ ಚಿತ್ರರಂಗದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಎವಿಆರ್ ಗ್ರೂಪ್ ಸಂಸ್ಥಾಪಕ ಅರವಿಂದ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸಿಪಿ ಚಂದನ್ ಅವರ ನೇತೃತ್ವದ ತಂಡ ಶ್ರೀಲಂಕಾದಿಂದ ಬೆಂಗಳೂರಿಗೆ ಮರಳುತ್ತಿದ್ದ ಅರವಿಂದ್‌ನ್ನು ವಶಕ್ಕೆ ಪಡೆದುಕೊಂಡಿದ್ದು, ಕಳೆದ ತಿಂಗಳು 17ರಂದು ನಟಿಯ ದೂರು ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.
2021ರಲ್ಲಿ ನಟಿ–ಅರವಿಂದ್ ಪರಿಚಯ ಹೆಚ್ಚಾಗಿದ್ದು, 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್ ಕ್ರಿಕೆಟ್ ಕಪ್’ ಉದ್ಘಾಟನೆಗೆ ನಟಿಯನ್ನು ಆಹ್ವಾನಿಸಿದ ಬಳಿಕ ಇಬ್ಬರ ನಡುವೆ ಸ್ನೇಹ ಗಾಢಗೊಂಡಿತ್ತು. ಆದರೆ ಅದೇ ವರ್ಷ ಆಗಸ್ಟ್‌ನಲ್ಲಿ ಅರವಿಂದ್ ಏಕಾಏಕಿ ಸಂಪರ್ಕ ಕಡಿತಗೊಳಿಸಿದ್ದರಿಂದ ನಟಿಗೆ ಅನುಮಾನ ಹುಟ್ಟಿತ್ತು. ನಂತರ ಅವನು ಮತ್ತೆ ಸಂಪರ್ಕಿಸಿ ಅಸ್ವಸ್ಥ ವರ್ತನೆ ಪ್ರದರ್ಶಿಸುತ್ತಿದ್ದನು ಎಂದು ದೂರು ಹೇಳುತ್ತದೆ.
ಅರವಿಂದ್ ನಂತರ ನಟಿಗೆ ನಿರಂತರ ಕಿರುಕುಳ ನೀಡಿ, ಮದುವೆಯಾಗುತ್ತೇನೆ ಎಂದು ಒತ್ತಡ ಹೇರುತ್ತಿದ್ದ. ಈ ಒತ್ತಡದಿಂದ ಹೆದರಿ ನಟಿ ನೂರು ಮಾತ್ರೆಗಳು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ FIRನಲ್ಲಿ ವಿವರಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಅರವಿಂದ್‌ನ ಕಿರುಕುಳ, ಮಾನಸಿಕ ಒತ್ತಡ ಮತ್ತು ಬೆದರಿಕೆ ಕುರಿತಂತೆ ತನಿಖೆ ಮುಂದುವರೆಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

