ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡಗೆ ನೋಟಿಸ್

ಸುದೀಪ್ ನಟನೆಯ ‘ಹೆಬ್ಬುಲಿ, ದರ್ಶನ್ ನಟನೆಯ ರಾಬರ್ಟ್, ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ನಟನೆಯ ಮದಗಜ ಸಿನಿಮಾಗಳನ್ನು ನಿರ್ಮಿಸಿ ಉಮಾಪತಿ ಶ್ರೀನಿವಾಸ್ ಫೇಮಸ್ ಆಗಿದ ತ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡಗೆ ನೋಟಿಸ್ ನೀಡಲಾಗಿದೆ

ಎಚ್ಎಸ್ಆರ್ ಲೇ ಔಟ್ನ 3ನೇ ಸೆಕ್ಟರ್ನಲ್ಲಿರುವ ಬಿಡಿಎನ 6 ನಿವೇಶನವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ ಒತ್ತುವರಿ ಮಾಡಿಕೊಂಡಿದ್ದಾರೆ .ಈ ಜಾಗ 1,545 ಚದರ ಮೀಟರ್ ವಿಸ್ತೀರ್ಣ ಇದೆ. ‘ಈ ಒತ್ತುವರಿಯನ್ನು ಏಕೆ ತೆರವು ಮಾಡಬಾರದು’ ಎಂದು ಬಿಡಿಎ ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿದ್ದು, ಇದನ್ನು ತೆರವು ಮಾಡಲು ಅನುಮತಿ ಕೊಡಬೇಕು’ ಎಂದು ಬಿಡಿಎ ಆಯುಕ್ತರಿಗೆ ಇಂಜಿನಿಯರ್ ಕಡತ ರವಾನಿಸಿದ್ದರು. ಒತ್ತುವರಿ ತೆರವು ಮಾಡುವ ಮುನ್ನ ಉಮಾಪತಿಗೆ ನೋಟೀಸ್ ನೀಡಲಾಗಿದೆ. ‘ಬಿಡಿಎ ನಿವೇಶನಗಳು ನಿಮಗೆ ಸಂಬಂಧಿಸಿದ್ದು ಎಂಬುದಕ್ಕೆ ದಾಖಲೆ ನೀಡುವಂತೆ ಉಮಾಪತಿಗೆ ಸೂಚಿಸಲಾಗಿದೆ. ಫೆ.15ರ ಒಳಗೆ ದಾಖಲೆ ಸಲ್ಲಿಕೆ ಮಾಡದೆ ಹೋದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.




