Sunday, September 8, 2024

Latest Posts

ಕಾಲೇಜಿನಲ್ಲೇ ಹೊಡೆದಾಡಿದ ಪ್ರೊಫೆಸರ್- ಪ್ರಿನ್ಸಿಪಲ್, ವೀಡಿಯೋ ವೈರಲ್..

- Advertisement -

ಶಿಕ್ಷಕರಂದ್ರೆ ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ಧಿ ಹೇಳುವ ಗುರು. ಭಾರತದಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದ್ರೆ ಮಧ್ಯಪ್ರದೇಶದ ಕಾಲೇಜೊಂದರಲ್ಲಿ, ಪ್ರೊಫೆಸರ್ ಒಬ್ಬರು ಸಿಟ್ಟಿಗೆದ್ದು, ಪ್ರಿನ್ಸಿಪಲ್‌ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿಯ ನಾಗುಲಾಲ್ ಮಾಳ್ವಿಯಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು, ಪ್ರಾಂಶುಪಾಲರ ಕ್ಯಾಬಿನ್‌ಗೆ ಬಂದು, ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆಗ ಕಿರಿಕ್ ಮಾಡಿ, ಈ ಹಲ್ಲೆ ನಡೆಸಲಾಗಿದೆ. ಬ್ರಹ್ಮದೀಪ್ ಅಲೂನೆ ಎಂಬ ಪ್ರಾಧ್ಯಾಪಕರು ಈ ಕೃತ್ಯ ನಡೆಸಿದ್ದು, ಇವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಹಲ್ಲೆಗೊಳಗಾದ ಪ್ರಿನ್ಸಿಪಾಲರನ್ನು ಶೇಖರ್, ಮೇದಾಮ್ವರ್ ಎಂದು ಗುರುತಿಸಲಾಗಿದೆ.

ಅಷ್ಟಕ್ಕೂ ಈ ಹಲ್ಲೆ ನಡೆಸೋಕ್ಕೆ ಕಾರಣ ಏನಂದ್ರೆ, ಬ್ರಹ್ಮದೀಪ್ ಭೋಪಾಲ್‌ನಿಂದ ಟ್ರಾನ್ಸಫರ್ ಆಗಿ, ಉಜ್ಜಯಿನಿ ಕಾಲೇಜ್ ಸೇರಿಕೊಂಡಿದ್ದರು. ಇವರು ಪ್ರತಿದಿನ ಕಾಲೇಜಿಗೆ ಬಂದ ಸ್ವಲ್ಪ ಹೊತ್ತಿನ ಬಳಿಕ, 5 ಕಿಲೋ ಮೀಟರ್ ವಾಕಿಂಗ್ ಮಾಡಲು ಹೋಗುತ್ತಿದ್ದರು. ಆದ್ರೆ ಅದಕ್ಕೂ ಮುನ್ನ ಪ್ರಿನ್ಸಿಪಲ್ ಕೆಲ ವಿಷಯದ ಬಗ್ಗೆ ಮಾತನಾಡಲು, ಬ್ರಹ್ಮದೀಪ್ ಅವರನ್ನು ಕ್ಯಾಬಿನ್‌ಗೆ ಕರೆದಿದ್ದರು. ‘ಈಗಾಗಲೇ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಇದೆ. ನಮ್ಮ ಕಾಲೇಜನ್ನು ವ್ಯಾಕ್ಸಿನೇಶನ್ ಸೆಂಟರ್ ಮಾಡಲಾಗಿದೆ. ಈ ವೇಳೆ ನೀವು ಕಾಲೇಜಿನಲ್ಲೇ ಇರಬೇಕಾಗತ್ತೆ ಎಂದು ಹೇಳಿದೆ. ಇಷ್ಟಕ್ಕೆ ಕೋಪಗೊಂಡ ಬ್ರಹ್ಮದೀಪ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಪ್ರಿನ್ಸಿಪಲ್ ಹೇಳಿದ್ದಾರೆ.

ಇನ್ನೊಂದೆಡೆ ಬ್ರಹ್ಮದೀಪ್ ಪ್ರಿನ್ಸಿಪಲ್ ವಿರುದ್ಧ ಹೇಳಿಕೆ ನೀಡಿದ್ದು, ಅವರು ಎಲ್ಲರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಹೀಗಾಗಿ ಇವರ ಅವಧಿಯಲ್ಲಿ ಮೂವರು ರಿಟೈರ್‌ಮೆಂಟ್ ತೆಗೆದುಕೊಂಡಿದ್ದಾರೆ. ಮೊನ್ನೆ ನನಗೂ ಅವರ ಕೊಠಡಿಗೆ ಕರೆದು ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ. ಅದಕ್ಕೆ ನಾನು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss