Sunday, September 8, 2024

Latest Posts

ಸರ್ಕಾರಿ ಶಾಲೆಯಲ್ಲಿ ಸಿಗುತ್ತಿಲ್ಲ ಸರಿಯಾದ ಸೌಲಭ್ಯ..!

- Advertisement -

www.karnatakatv.net: ರಾಯಚೂರು: ಸರ್ಕಾರಿ ಶಾಲೆ ಹೆಸರಿಗೆ ಮಾತ್ರ, ಆದ್ರೆ ಅಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ಅಲ್ಲಿನ ಮಕ್ಕಳಿಗೆ ದೊರೆಯುತ್ತಿಲ್ಲ ಅಂತ ಗ್ರಾಮಸ್ಥರು ಬೆಸರವ್ಯಕ್ತಪಡಿಸಿದ್ದಾರೆ.

ರಾಯಚೂರು ತಾಲ್ಲೂಕಿನ ಅಮರಾವತಿ ಪೋತಗಲ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೂ ಇಲ್ಲ.. ಮೂಲಭೂತ ಸೌಕರ್ಯಗಳೂ ಇಲ್ಲ.. ತಿಪ್ಪೆ ಗುಂಡಿಯಂತಿರೋ ಈ ಶಾಲೆಗೆ ಬಡ ಮಕ್ಕಳು ಕಲಿಯಬೇಕು ಅಂತ ಬಂದರೂ ಅವರಿಗೆ ಬೋಧಿಸಲು ಶಿಕ್ಷಕರಿಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ನಮ್ಮ ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡಿ ಅಂತ ಗ್ರಾಮಸ್ಥರು ಅಧಿಕಾರಿಗಳ ದುಂಬಾಲು ಬಿದ್ದಿದ್ದಾರೆ.

ಇನ್ನು ಈ ಶಾಲೆಗೆ ಮೊದಲು ಇಬ್ಬರು ಖಾಯಂ ಶಿಕ್ಷಕರಿದ್ದರು. ಅವರಲ್ಲಿ ಓರ್ವರು ಮುಂಬಡ್ತಿ ಪಡೆದು ಬೇರೆಡೆಗೆ ವರ್ಗಾವಣೆಯಾಗಿದ್ದಾರೆ. ಇನ್ನು ಇಲ್ಲಿರುವ ಮತ್ತೋರ್ವ ಶಿಕ್ಷಕಿ ಅಂದ್ರೆ ಸುನೀತಾ ಜೋಶಿ ಕೂಡಾ ಯರವಲು ಸೇವೆ ಅಂತ ಇಲ್ಲಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿರೋ ಯರಮರಸ್ ಕ್ಯಾಂಪ್ ನ ಶಾಲೆಗೆ ಹೋಗಿದ್ದಾರೆ. ಆದರೆ ಹಾಗೆ ಯರವಲು ಸೇವೆ ಅಂತ ಹೋದವರು ಮಾತೃ ಶಾಲೆಗೆ ಮರಳಬೇಕು ಎನ್ನುವ ಆಯುಕ್ತರ ಆದೇಶವಿದ್ದರೂ. ಆ ಶಿಕ್ಷಕಿ ಮಾತ್ರ ಮರಳಿ ಶಾಲೆಗೆ ಬಂದಿಲ್ಲ. ಹೀಗಾಗಿ ಶಾಲೆಯಲ್ಲಿ ಯಾರೂ ಶಿಕ್ಷಕರೇ ಇಲ್ಲದಂತಾಗಿದ್ದು ಮಕ್ಕಳು ಇಂದು ಶಿಕ್ಷಕರು ಬರಬಹುದು ನಾಳೆ ಶಿಕ್ಷಕರು ಬರಬಹುದು ಅಂತ ಶಾಲೆ ಆರಂಭವಾಗದಿದ್ದರೂ ಶಾಲೆಯ ಬಾಗಿಲಿಗೆ ಬಂದು ಎಡತಾಕಿ ಹೋಗುತ್ತಿದ್ದಾರೆ. ವಿಪರ್ಯಾಸ ಎಂದರೆ ಒಂದು ಶಾಲೆ ಹೇಗಿರಬೇಕೋ ಹಾಗಿರದೇ ಪೋತಗಲ್ ಸರ್ಕಾರಿ ಶಾಲೆ ತಿಪ್ಪೆಗುಂಡಿಯAತಾಗಿದೆ ಹಾಗಾಗಿ ಈ ಕೂಡಲೇ ಶಿಕ್ಷಕರ ಜೊತೆಗೆ ಶಾಲೆಗೆ ಮೂಲ ಭೂತ ಸೌಕರ್ಯ ಕಲ್ಪಿಸಿ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಸರ್ವ ಶಿಕ್ಷಣ ಅಭಿಯಾನ, ಮರಳಿ ಬಾ ಶಾಲೆಗೆ, ಅಕ್ಷರ ದಾಸೋಹದಂತ ಯೋಜನೆಗಳು ಯಾವ ಪುರುಷಾರ್ಥಕ್ಕೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲಿ ಎಂಬುದೇ ನಮ್ಮ ಆಶಯ.

ಅನಿಲ್ ಕುಮಾರ್, ಕರ್ನಾಟಕ ಟಿ.ವಿ- ರಾಯಚೂರು

- Advertisement -

Latest Posts

Don't Miss