ಹಿಂದಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ವೀಣಾ ಕಪೂರ್ (74)ಅವರನ್ನು ಸ್ವಂತ ಮಗನೇ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಸಚಿನ್ ಕಪೂರ್ ಹಾಗೂ ವೀಣಾ ಕಪೂರ್ ನಡುವೆ ವಾಗ್ವಾದ ನಡೆದಿತ್ತು. 12 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಕುರಿತಾಗಿ ಅಮ್ಮನ ಜೊತೆ ಜಗಳ ಆರಂಭ ಆಯಿತು ಎಂದು ಆತ ಹೇಳಿದ್ದಾನೆ. ಈ ಸಂದರ್ಭದಲ್ಲಿ ಪರಿಸ್ಥತಿ ಕೈ ಮೀರಿ ಸ್ವಂತ ತಾಯಿಯನ್ನುಕೊಲೆ ಮಾಡಿರುವುದಾಗಿ ಸಚಿನ್ ಕಪೂರ್ ಒಪ್ಪಿಕೊಂಡಿದ್ದಾನೆ ವರದಿ ಆಗಿದೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ವಿಷಯ ತಿಳಿದು ಬಂದಿದೆ. ವೀಣಾ ಕಪೂರ್ ಅವರು ನಾಪತ್ತೆ ಆಗಿದ್ದಾರೆ ಎಂದು ಕಲ್ಪತರು ಸೊಸೈಟಿಯ ಭದ್ರತಾ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಹತ್ಯೆ ವಿಚಾರವನ್ನು ಸಚಿನ್ ಕಪೂರ್ ಒಪ್ಪಿಕೊಂಡಿದ್ದಾನೆ.
ನಿಶ್ಚಿತಾರ್ಥ ಮಾಡಿಕೊಂಡ ಕ್ಯೂಟ್ ಜೋಡಿಗೆ ರಾಕಿಂಗ್ ದಂಪತಿ ಅಭಿನಂದನೆ
ಉಡುಪಿ ಸಬ್ಜೈಲಿನಲ್ಲಿ ನೇಣುಬಿಗಿದುಕೊಂಡು ವಿಚಾರಣಾಧೀನ ಕೈದಿ ಆತ್ಮಹತ್ಯೆ