ಆ್ಯಕ್ಸಿಡೆಂಟ್ ಆದ ಹಾವಿನ ರಕ್ಷಣೆ..!

www.karnatakatv.net : ಹುಬ್ಬಳ್ಳಿ : ನರಗದಲ್ಲಿ ವಾಹನಗಳು ಮೇಲೆ ಹರಿದು ತೀವ್ರ ಗಾಯಗೊಂಡಿದ್ದ 7 ಅಡಿ ಉದ್ದದ ಹಾವೊಂದನ್ನು  ರಕ್ಷಿಸಿ, ಚಿಕಿತ್ಸೆ ಕೊಡಿಸಿ ಉರಗ ಪ್ರೇಮಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಅಮರಗೋಳದಲ್ಲಿ ಸುಮಾರು 7 ಅಡಿ ಉದ್ದದ ಕೆರೆ ಹಾವು ರಸ್ತೆ ದಾಟುವ ವೇಳೆ ವಾಹನಗಳು ಹರಿದು ತೀವ್ರವಾಗಿ ಗಾಯಗೊಂಡಿತ್ತು.  ರಸ್ತೆಯಲ್ಲಿ ಹೊರಳಾಡ್ತಾ ಜೀವನ್ಮರಣ ಹೋರಾಟ ನಡೆಸ್ತಿದ್ದ ಹಾವನ್ನು ಕಂಡ ಸ್ಥಳೀಯರು ಉರಗ ಪ್ರೇಮಿ ಸ್ನೇಕ್ ನಾಗರಾಜ್ ಗೆ ಕರೆ ಮಾಡಿ ಸುದ್ದಿ ತಿಳಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ನಾಗರಾಜ್ ಗಾಯಗೊಂಡ ಹಾವನ್ನು ಜೋಪಾನವಾಗಿ ತೆಗೆದುಕೊಂಡು ಅಮರ ಗೋಳದ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ.

ಇನ್ನು ಅಪಘಾತದಲ್ಲಿ ಗಾಯಗೊಂಡ ಹಾವಿನ ಹೊಟ್ಟೆಯ ಭಾಗ ಒಡೆದಿದ್ದರಿಂದ, ಪಶು ವೈದ್ಯರು ಸ್ನೇಕ್ ನಾಗರಾಜ್ ಸಹಕಾರದಿಂದ ಐದಕ್ಕೂ ಹೆಚ್ಚು ಹೊಲಿಗೆಯನ್ನು ಹಾಕಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಸ್ನೇಕ್ ನಾಗರಾಜ್ ಬಳಿ ಹಾವನ್ನು ಇರಿಸಿಕೊಂಡಿದ್ದು, ಕೊಂಚ ಚೇತರಿಸಿಕೊಂಡ ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

About The Author