www.karnatakatv.net: ರಾಯಚೂರು: ಹೈವೇ ರಸ್ತೆಗಳಲ್ಲಿ ಹತ್ತಿ ತುಂಬಿದ ಗಾಡಿಗಳಿಂದ ಹತ್ತಿ ಕದಿಯಲು ಯತ್ನಿಸುತ್ತಿದ್ದ ಬಾಲಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ರಾಯಚೂರು- ಹೈದ್ರಾಬಾದ್ ಹೆದ್ದಾರಿಯಲ್ಲಿ ದಿನ ನಿತ್ಯ ಲಾರಿಗಳು, ಗೂಡ್ಸ್ ವಾಹನಗಳು ಟನ್ ಗಟ್ಟಲೆ ಹತ್ತಿ ತುಂಬಿಕೊoಡು ಸಂಚರಿಸುತ್ತವೆ. ಅದರೆ ಈ ವಾಹನಳಿಂದ ಹತ್ತಿಯನ್ನು ಕದ್ದಿಯುವುದು ಮಹಿಳೆಯರು ಮತ್ತು ಮಕ್ಕಳ ಕೆಲಸವಾಗಿ ಮಾಡಿಕೊಂಡಿದ್ದಾರೆ. ಇವರ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಇಂದು ಅವರನ್ನು ಬಾಲ ಮಂದಿರಕ್ಕೆ ಕರೆದೊಯ್ದಿದ್ದಾರೆ.
ಹೌದು, ಈ ಹೆದ್ದಾರಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಕ್ಕಳು ಮತ್ತು ಮಹಿಳೆಯರು ಹತ್ತಿ ಕದಿಯೋ ಸಲುವಾಗಿ ಸಂಚರಿಸುವ ಲಾರಿ, ಟಾಟಾ ಏಸ್ ವಾಹನಗಳ ಹಿಂದೆ ಓಡುತ್ತಾರೆ. ಇದನ್ನೇ ತಮ್ಮ ಕಸುಬು ಮಾಡಿಕೊಂಡಿದ್ದ ಇವರನ್ನು ಇಂದು ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ರು. ಈ ವೇಳೆ ಮಹಿಳೆಯೊಬ್ಬಳು ತಮ್ಮ ಮಕ್ಕಳನ್ನು ಬಾಲ ಮಂದಿರಕ್ಕೆ ಕರೆದೊಯ್ಯದಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ರಂಪಾಟಕ್ಕಿಳಿದಿದ್ಲು. ಕಡೆಗೆ ಅಧಿಕಾರಿಗಳು ಇಬ್ಬರು ಬಾಲಕರನ್ನು ರಕ್ಷಿಸಿ ಬಾಲ ಮಂದಿರಕ್ಕೆ ಕರೆದೊಯ್ದಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು.