Tuesday, July 1, 2025

Latest Posts

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

- Advertisement -

www.karnatakatv: ರಾಯಚೂರು : ಕರೊನಾ ಮಹಾಮಾರಿ ಸಂದರ್ಭಗಳಲ್ಲಿ ಜೀವವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರು ಈಗ ರೊಚ್ಚಿಗೆದ್ದಿದ್ದಾರೆ. ಬಹುದಿನದ ಬೇಡಿಕೆಗಳನ್ನ ಈಡೇರಿಸದೇ ಇದ್ದರೆ ಮೂರನೇ ಅಲೆ ಸಂದರ್ಭದಲ್ಲಿ ಕರ್ತವ್ಯದಿಂದ ವಿಮುಖರಾಗುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಯಚೂರು ಜಿಲ್ಲೆಯ ನೂರಾರು ಕಾರ್ಯಕರ್ತೆಯರು ಬೀದಿಗಿಳಿದು ಹೋರಾಟ ಮಾಡುವುದಾಗಿ ಆಕ್ರೋಶಗೊಂಡಿದ್ದಾರೆ.

ಕರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಅತ್ಯಂತ ಶ್ಲಾಘನೀಯ. ಒಂದನೇ ಅಲೆಯಲ್ಲಿ 28 ಜನ ಕೊರೊನಾಕ್ಕೆ ಬಲಿಯಾದ್ರೆ 70 ಜನ ಕರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಅಲೆಯಲ್ಲಿ 19 ಜನ ಸಾವನ್ನಪ್ಪಿದ್ದರೆ 173 ಜನರಿಗೆ ಸೋಂಕು ತಗುಲಿತ್ತು. ಕಳೆದ ಒಂದೆವರೆ ವರ್ಷದಲ್ಲಿ ಕೋವಿಡ್ ಸೇರಿ ನಾನಾ ಕಾರಣದಿಂದ ಒಟ್ಟು 103 ಜನ ಅಂಗನವಾಡಿ ಕಾರ್ಯಕರ್ತೆಯರು ಪ್ರಾಣ ಬಿಟ್ಟಿದ್ದಾರೆ. ಆದ್ರೆ ಸರ್ಕಾರ ಮೊದಲನೇ ಅಲೆಯಲ್ಲಿ ಮೃತಪಟ್ಟ 28 ಜನರಲ್ಲಿ 19 ಜನರಿಗೆ ಮಾತ್ರ 30 ಲಕ್ಷ ರೂಪಾಯಿ ಪರಿಹಾರ ನೀಡಿ ಇದುವರೆಗೆ ಉಳಿದವರ್ಯಾರಿಗೂ ಯಾವುದೇ ಪರಿಹಾರ ನೀಡಿಲ್ಲ. ಕರ್ತವ್ಯ ನಿರ್ವಹಿಸುವವರಿಗೆ ಸುರಕ್ಷತೆ ದೃಷ್ಟಿಯಿಂದ ಮಾಸ್ಕ್, ಸ್ಯಾನಿಟೈಸರ್ ಸಹ ನೀಡಿಲ್ಲ. ಹೀಗಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಲಕ್ಷ 25 ಜನ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಸದ ಹೊರತು ಮೂರನೇ ಅಲೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಬಾರದು ಅಂತ ನಿರ್ಧರಿಸಿದ್ದಾರೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss