ಡಿಕೆಶಿ CM ಮಾಡದಿದ್ದರೆ ಹೋರಾಟ – ಹೈಕಮಾಂಡ್ ಗೆ ಒಕ್ಕಲಿಗರ ಎಚ್ಚರಿಕೆ!

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಕುರಿತ ರಾಜಕೀಯ ಗೊಂದಲ ಹೆಚ್ಚುತ್ತಿರುವ ಬೆನ್ನಲ್ಲೇ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪ ಗೌಡ ಕಾಂಗ್ರೆಸ್ ಹೈಕಮಾಂಡ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆಂಬ ನಂಬಿಕೆಗಾಗಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ಗೆ ಮತ ನೀಡಿತು. ಅವರ ಶ್ರಮದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಶಿವಕುಮಾರ್ ಅವರಿಗೆ ಅಕಸ್ಮಾತ್ಸಿಎಂ ಸ್ಥಾನ ವಂಚನೆ ಆಗಿದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಹೇಳಿದರು.

ಮಂಡಳಿಯಿಂದ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಂಚಪ್ಪ ಗೌಡ, 40–50 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯಿದವರಿಗೆ ಅಧಿಕಾರ ಸಿಗಬೇಕು. ಡಿ.ಕೆ. ಶಿವಕುಮಾರ್ ಅವರ ನಾಯಕತ್ವದ ಕಾರಣಕ್ಕೆ ನಮ್ಮ ಸಮುದಾಯದಿಂದ ಕಾಂಗ್ರೆಸ್ಗೆ ದೊಡ್ಡ ಪ್ರಮಾಣದ ಬೆಂಬಲ ಸಿಕ್ಕಿದೆ. ಅಧ್ಯಕ್ಷರಾಗಿರುವವರೇ ಮುಖ್ಯಮಂತ್ರಿ ಆಗಬೇಕು ಎಂಬ ಮಾತಿದ್ದರೂ, ಸಿದ್ದರಾಮಯ್ಯ ಸಿಎಂ ಸ್ಥಾನ ಪಡೆದರು. ಇದು ನಾವು ಒಪ್ಪಿಕೊಂಡಿದ್ದರೂ, ಹೈಕಮಾಂಡ್ ನೀಡಿದ ಭರವಸೆ ಇಂದು ಪಾಲನೆಗಿಲ್ಲ ಎಂದು ಟೀಕಿಸಿದರು.

ಒಕ್ಕಲಿಗರ ಸಂಘದ ನಾಯಕರು ಕೂಡ ಸಿಎಂ ಸ್ಥಾನಕ್ಕೆ ಶಿವಕುಮಾರ್ ಅವರನ್ನು ಬೆಂಬಲಿಸಿದರು. ಪಕ್ಷಕ್ಕಾಗಿ ಯಾವ ಸಂದರ್ಭದಲ್ಲಾದರೂ ನಿಂತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂದು ಪ್ರಧಾನ ಕಾರ್ಯದರ್ಶಿ ಗಂಗಾಧರ್ ಹೇಳಿದರು. ಮಾಜಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ರೆಡ್ಡಿ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಇತ್ತು. ಮೊದಲ ಎರಡು ವರ್ಷ ಸಿದ್ದರಾಮಯ್ಯ, ನಂತರ ಡಿಕೆಶಿ ಎಂದು ಮಾತು. ಒಕ್ಕಲಿಗ ಸಮುದಾಯ ಹೆಚ್ಚು ಮತ ನೀಡಿದ್ದು ಡಿಕೆಶಿ ಮುಖ್ಯಮಂತ್ರಿ ಆಗುವ ನಿರೀಕ್ಷೆಯಿಂದಲೇ. ನಮ್ಮ ಸಹನೆಯ ಮಿತಿ ದಾಟುವ ಮೊದಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author