ಎನ್. ಮಹೇಶ್ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ

www.karnatakatv.net : ಚಾಮರಾಜನಗರ: ಬಿಜೆಪಿ ಸೇರ್ಪಡೆಗೊಂಡ ಬಿ ಎಸ್ ಪಿ ಉಚ್ಚಾಟಿತ ಶಾಸಕ ಎನ್. ಮಹೇಶ್ ವಿರುದ್ದ ಚಾಮರಾಜನಗರದಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಾಮರಾಜನಗರ ಶ್ರೀ ಚಾಮರಾಜೇಶ್ವರ ದೇವಾಲಯದ‌ ಮುಂಭಾಗ ಸಮಾವೇಶಗೊಂಡ ದಲಿತ ಸಂಘಟನೆಗಳ ಕಾರ್ಯಕರ್ತರು ಶಾಸಕ ಎನ್‌ ಮಹೇಶ್ ಪಕ್ಷಾಂತರ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿ ಪ್ರತಿಭಟಿಸಿದರು.

ಕಳೆದ ಸಲ ಮೈತ್ರಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದರು ಆ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾರಣ ಬಿಎಸ್ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು..ದಲಿತ ಮುಖಂಡರಾದ‌‌ ಸಿ.ಎಂ.ಕೃಷ್ಣಮೂರ್ತಿ, ನಗರಸಭಾ ಸದಸ್ಯ ಆರ್.ಪಿ ನಂಜುಂಡಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕರ್ನಾಟಕ ಟಿವಿ ಚಾಮರಾಜನಗರ

About The Author