Friday, July 4, 2025

Latest Posts

ಬಿಜೆಪಿ ಕೇಂದ್ರ ಸರಕಾರ-ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ

- Advertisement -

Hassan News: ಹಾಸನ: ದ್ವೇಷದ ರಾಜಕಾರಣಕ್ಕಾಗಿ ಬಿಜೆಪಿಯ ಸತ್ಯ ಮರೆಮಾಚಿಸಿ ಕೇಂದ್ರ ಸರಕಾರದ ಏಜೆಂಟರಂತೆ ವರ್ತಿಸಿ ನೋಟಿಸ್ ನೀಡಿರುವುದನ್ನು ಕೂಡಲೇ ಹಿಂಪಡೆಯದೇ ಮುನ್ನುಡಿ ಬರೆಯುವುದಾದರೇ ಕರ್ನಾಟಕದಲ್ಲಿ ರಕ್ತಕ್ರಾಂತಿಗೆ ಸಿದ್ದರಾಗಬೇಕಾಗತ್ತದೆ ಎಂದು ಕರೆ ನೀಡಿ ರಾಜ್ಯಪಾಲರ ವಿರುದ್ಧ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಡಿಸಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ನಗರದ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೊದಲು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿ ಜಿಲ್ಲೆಗೆ ಬಂದ ಹಿನ್ನಲೆಯಲ್ಲಿ ಸಭೆ ಮಾಡಿ ಚರ್ಚೆ ಮಾಡಿ ಕೊನೆಯಲ್ಲಿ ತೀರ್ಮಾನಕೈಗೊಂಡಿದ್ದು, ಈಗಾಗಲೇ ಲೆಟರ್‌ನ್ನು ರಾಜ್ಯಪಾಲರಿಗೆ ನೀಡಿ ಅವರ ಮೂಲಕ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡುವ ಆದೇಶ ಮಾಡುತ್ತಾರೆ ಎನ್ನುವ ಸೂಚನೆಯು ಮಾಧ್ಯಮದ ಮೂಲಕ ದಟ್ಟವಾದ ವರದಿ ಹಬ್ಬಿದೆ.

ಈಡಿಯನ್ನು ಉಪಯೋಗಿಸಿಕೊಂಡು ಏನಾದರೂ ಈ ರೀತಿ ಅನ್ಯಮಾರ್ಗಕ್ಕೆ ಇಳಿದರೇ ಕರ್ನಾಟಕದಲ್ಲಿ ರಕ್ತಕ್ರಾಂತಿ ಆಗುತ್ತದೆ ಎನ್ನುವ ದೃಷ್ಠಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಸಂದೇಶ ಕಳುಹಿಸಿಕೊಟ್ಟು ರಾಜ್ಯಪಾಲರಿಗೆ ಮತ್ತು ಬಿಜೆಪಿ ಸರಕಾರಕ್ಕೆ ಮುನ್ನೇಚರಿಕೆ ಇದಾಗಿದೆ. ಇದೆ ರೀತಿ ಬಿಜೆಪಿ ಹಿಂಬಾಗಲಿನಿಂದ ಎರಡು ಬಾರಿ ಅಧಿಕಾರ ಪಡೆದಿದ್ದು, ಯಾವತ್ತು ಈ ಕರ್ನಾಟಕದ ಜನ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟಿರುವುದಿಲ್ಲ. ಈ ರೀತಿ ವಾಮ ಮಾರ್ಗದ ಮೂಲಕ ಈ ರಾಜ್ಯದಲ್ಲಿ ಅಧಿಕಾರ ನಡೆಸಿದ್ದಾರೆ. ಈ ಸಾರಿ ಅದೆ ರೀತಿ ನಡೆಸುತ್ತೆವೆ ಎಂದು ಸುಭದ್ರವಾದ ಸರಕಾರವನ್ನು ಏನಾದರೂ ವ್ಯವಸ್ಥಿತವಾಗಿ ಸಂಚು ಮಾಡಲು ಮುಂದಾದರೇ ಉಗ್ರವಾದ ಹೋರಾಟದ ಪ್ರತಿಭಟನೆಯಲ್ಲ ರಕ್ತಕ್ರಾಂತಿ ಆಗುತ್ತೆ ಎಂದು ಈ ಪದವನ್ನು ಪುನರ್ ಉಚ್ಚರಿಸಿ ರಾಜ್ಯದ ಜನರಿಗೆ ಕರೆ ಕೊಟ್ಟು ರಾಜ್ಯಪಾಲರು ಕೂಡಲೇ ಬಿಜೆಪಿ ಏಜೆಂಟರ ಕೆಲಸವ ಬಿಡಬೇಕು! ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಣ್ಣ ರಾಜ್ಯದಲ್ಲಿ ಒಂದು ಪ್ರಭಲವಾಗಿರುವ ಸರಕಾರ ಮಾಡುತ್ತಿದ್ದು, ಇಂತಹ ಸರಕಾರವನ್ನು ಏನಾದರೂ ಮಾಡಿ ವಿಫಲಗೊಳಿಸಿ ತೆಗೆಯಬೇಕು ಎಂಬುದು ಬಿಜೆಪಿ ಸರಕಾರದ ಮುನ್ಸೂಚನೆ. ಮೂಡದಲ್ಲಿ ನಾನೊಂದು ಚಾಲೆಂಜು ತೆಗೆದುಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರದು ಮೂಡದಲ್ಲಿ ಒಂದೆ ಒಂದು ಪೈಸೆಯದು ಸೂಜಿಯಷ್ಟು ತಪ್ಪಿದ್ದರೇ ಬಿಜೆಪಿ ಅವರು ಹೇಳಿದ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಸವಾಲೆಸೆದರು. ವಾಲ್ಮೀಕಿ ನಿಗಮವನ್ನು ನಾವು ಸಮರ್ಥನೆ ಮಾಡುವುದಿಲ್ಲ. ಅದರಲ್ಲಿ ಅನ್ಯಾಯವಾಗಿದ್ದು, ಯಾರು ಮಾಡಿದ್ದು, ಅದಕ್ಕೆ ಯಾರು ಕಾರಣಕರ್ತರು? ಒಂದು ಮನೆ ಎಂದ ಮೇಲೆ ಯಾರಾದರೂ ತಪ್ಪು ಇದ್ದೆ ಇರುತ್ತದೆ. ಇದಕ್ಕೆ ಸಿದ್ದರಾಮಯ್ಯ ಅವರು ಜವಬ್ಧಾರಿನಾ! ಆವಬ್ಧಾರಿ ಹೊತ್ತಿರುವ ಮಂತ್ರಿ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಜೈಲಲ್ಲಿ ಇದ್ದಾರೆ. ಅಧಿಕಾರಿಗಳು ಯಾರಿದ್ದಾರೆ ಅವರನ್ನು ಬಂಧಿಸಿ ಸರಕಾರ ಏನು ಮಾಡುತ್ತದೆ ಎಂದು ಗುಡುಗಿದರು.

ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಹಣ ಹೊಡೆದು ಅನ್ಯಾಯ ಮಾಡಿದ್ದಾರೆ. ಇದರಲ್ಲಿ ಮಂತ್ರಿ ಕುಮಕ್ಕು ಇಲ್ಲ ನನಗೆ ಗೊತ್ತಿಲ್ಲ ಕೆಲವೇ ಅಧಿಕಾರಿಗಳು ಮಾಡಿರುವುದಾಗಿ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಇದು ನಾಟಕೀಯ ಮಾಡಿ ಸಿದ್ದರಾಮಯ್ಯ ಮೇಲೆ ಆಪಧನೆ ಮಾಡುತ್ತಿದ್ದಾರೆ ಎಂದು ದೂರಿದರು. ಇನ್ನು ಮುಂದೆ ಈ ನಾಟಕ ನಡೆಯುವುದಿಲ್ಲ. ಏನಾದರೂ ಜೇನಿನ ಗೂಡಿಗೆ ಕೈ ಹಾಕಿ ಕಲ್ಲು ಹೊಡೆದಾಂಗೆ ಆಗುತ್ತದೆ ಎಂದು ಬಿಜೆಪಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೀನಿ ಎಂದರು. ಏನಾದರೂ ಈ ವಾಮ ಮಾರ್ಗ ಇಳಿದರೇ ಕರ್ನಾಟಕದ ಜನರು ಯಾವ ರೀತಿ ದಂಗೆ ಹೇಳುತ್ತಾರೆ ನೋಡಬೇಕಾಗುತ್ತದೆ. ಈ ಸಾಹಸಕ್ಕೆ ಕೈಹಾಕಬೇಡಿ. ಕೇಂದ್ರ ಸರಕಾರದಲ್ಲಿ ಇಲ್ಲಿಗೆ ಒಂದು ರೂ ಬಜೆಟ್ ನಲ್ಲಿ ಹಣ ಕೊಡಲು ಯೋಗ್ಯತೆ ಇಲ್ಲ. ಕರ್ನಾಟಕ ರಾಜ್ಯಕ್ಕೆ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು.

ನಮ್ಮ ಕರ್ನಾಟಕದಿಂದ ಜಿ.ಎಸ್.ಟಿ. ತೆರಿಗೆ ೪ ಲಕ್ಷದ ೫೩ ಸಾವಿರ ಕೋಟಿ ಹಣ ಈ ಸಾರಿ ಕೇಂದ್ರ ಸರಕಾರಕ್ಕೆ ಹೋಗಿದೆ. ರಿಟರ್ನ್ ಕೊಟ್ಟಿರುವುದು ೫೬ ಸಾವಿರ ಕೋಟಿ. ಬಾಕಿ ಹಣವು ಯಾವ ರೀತಿ ಮೋಸ ಆಗುತ್ತಿದೆ ತಿಳಿಸಲಾಗುವುದು ಮುಂದೆ ಬರುತ್ತಿವಿ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕರಾದ ಅಂಜಲಿ ನಿಂಬಾಲ್ಕರ್, ರಘುಮೂರ್ತಿ, ವೆಂಕಟರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಮಾಜಿ ಎಂ.ಎಲ್.ಸಿ. ಗೋಪಾಲಸ್ವಾಮಿ, ಮುಖಂಡರಾದ ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಜಾವಗಲ್ ಮಂಜುನಾಥ್, ಅಶೋಕ್, ಪ್ರಸನ್ನಕುಮಾರ್, ಲಕ್ಷ್ಮಣ್, ಪ್ರಕಾಶ್, ತಾರ ಚಂದನ್, ಜಮೀಲಾ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss