www.karnatakatv.net: ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅಂತಿಮ ಅನುಮೋದನೆ ನೀಡುವುದಕ್ಕೂ ಮೊದಲು ಲಸಿಕೆ ಬಳಸುವುದರಿಂದ ಆಗುವ ಅಪಾಯ ಮತ್ತು ಪ್ರಯೋಜನದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕಂಪನಿಗೆ ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವಾಕ್ಸಿನ್ ಲಸಿಕೆಯ ಬಳಕೆಯಿಂದ ಆಗುವ ಅಪಾಯ ಮತ್ತು ಪ್ರಯೋಜನದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಕಂಪನಿಗೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯು ನವೆಂಬರ್ 3ರಂದು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬAಧಿಸಿದAತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಿದೆ ಅದಾದನಂತರ ಲಸಿಕೆಯ ತುರ್ತು ಬಳಕೆ ಕುರಿತು ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಅಧಿಕೃತವಾಗಿ ತಿಳಿಸಲಿದೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕೊರೊನಾ ವೈರಸ್ ಸೋಂಕಿನ ವಿರುದ್ಧ ತುರ್ತು ಬಳಕೆಯ ಲಸಿಕೆ ಪಟ್ಟಿಗೆ ಸೇರಿಸುವಂತೆ ಕೋರಿ ಕಂಪನಿಯು ಕಳೆದ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು, ಅಗತ್ಯ ದಾಖಲೆಗಳೊಂದಿಗೆ ಅನುಮೋದನೆ ಶಿಫಾರಸ್ಸಿಗಾಗಿ ಅರ್ಜಿಯಲ್ಲಿ ಸಲ್ಲಿಸಿತ್ತು.
“ತಾಂತ್ರಿಕ ಸಲಹಾ ಸಮಿತಿಯು 2021ರ ಅಕ್ಟೋಬರ್ 26ರಂದು ಸಭೆ ನಡೆಸಿದ್ದು, ಲಸಿಕೆಯ ಜಾಗತಿಕ ಬಳಕೆಗಾಗಿ ಅಂತಿಮ ತುರ್ತು ಬಳಕೆ ಅನುಮೋದನೆಗೂ ಪೂರ್ವದಲ್ಲಿ ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸಲು ಲಸಿಕೆ ಉತ್ಪಾದಕರಿಂದ ಹೆಚ್ಚುವರಿ ಸ್ಪಷ್ಟೀಕರಣಗಳ ಅಗತ್ಯವಿರುವ ಬಗ್ಗೆ ನಿರ್ಧರಿಸಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. “ಈ ವಾರದ ಅಂತ್ಯದ ವೇಳೆಗೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಕಂಪನಿಯಿoದ ಸ್ಪಷ್ಟೀಕರಣಗಳನ್ನು ಸ್ವೀಕರಿಸಲು ತಾಂತ್ರಿಕ ಸಲಹಾ ಸಮಿತಿ ನಿರೀಕ್ಷಿಸುತ್ತದೆ. ನವೆಂಬರ್ 3ರ ಬುಧವಾರ ಅಂತಿಮವಾಗಿ ಅಪಾಯ ಮತ್ತು ಪ್ರಯೋಜನಗಳ ಬಗ್ಗೆ ಮೌಲ್ಯಮಾಪನಕ್ಕಾಗಿ ಮರುಸಂಗ್ರಹಿಸುವ ಗುರಿಯನ್ನು ಹೊಂದಿದೆ” ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.