ಮಂಡ್ಯ: ಜಿಲ್ಲೆಯ ಪಾಂಡವಪುರ ಬಸ್ ನಿಲ್ಧಾಣದ ಬಳಿ ಇರುವ ಪ್ರಾವಿಜನ್ ಸ್ಟೋರ್ ಗೆ ಬಂದಿದ್ದಂತಹ ಯುವತಿಯನ್ನು ಪುಂಡರು ಚುಡಾಯಿಸಿದ್ದನ್ನು ಖಂಡಿಸಿ ಅಂಗಡಿಯ ಮಾಲಿಕರಾದ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ ಪಾಂಡವಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಿರಾಣಿ ಅಂಗಡಿಯ ಮಾಲಿಕರಾದ ಚಂದ್ರಶೇಖರ್ ಅವರು ಯುವತಿಯನ್ನು ಕೆಲವು ಪುಂಡರು ರೇಗಿಸಿದ್ದಾರೆ. ರೇಗಿಸುವುದನ್ನು ತಡೆಯಲು ಯತ್ನಿಸಿದ್ದಾನೆ. ನಂತರ ಈ ರೀತಿ ಒಂಟಿ ಹೆಣ್ಣನ್ನು ರೇಗಿಸುವುದು ತಪ್ಪು ಮೊದಲು ಇಲ್ಲಿಂದ ಹೊರಡಿ ಎಂದು ಬುದ್ದಿ ಹೇಳಿದ್ದಕ್ಕೆ ಮಾಲಿಕರಾದ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಆರೋಪಿ ತನ್ನ ಸ್ನೇಹಿತರಿಗೆ ಕರೆಮಾಡಿ ಸ್ಥಳಕ್ಕೆ ಕರೆಸಿ ಅವರಿಂದ ಹಲ್ಲೆ ಮಾಡಿಸಿ ಅಂಗಡಿಯಲ್ಲಿದ್ದ ಕಂಪ್ಯೂಟರ್ ನಾಶ ಮಾಡಿ ಗಲ್ಲಾಪೆಟ್ಟಿಗೆಯಲ್ಲಿದ್ದ 40 ಸಾವಿರ ದೋಚಿ ಪರಾರಿಯಾಗಿದ್ದಾರೆ. ಇನ್ನು ಗಾಯಗೊಂಡಿರುವ ಅಂಗಡಿ ಮಾಲೀಕ ಚಂದ್ರಶೇಖರ್ಗೆ ಪಾಂಡವಪುರ ತಾಲೂಕು ಆಸ್ಪತ್ರೆಲಿ ಚಿಕಿತ್ಸೆ ನೀಡಲಾಗುತ್ತಿದೆ
ಹಿರೇಮರಳಿ ಗ್ರಾಮದ ರಕ್ಷಿತ್ ಮತ್ತು ಆತನ ಗ್ಯಾಂಗ್ ಸೇರಿ ಈ ಕೃತ್ಯ ಮಾಡಿದ ಆರೋಪ ಮಾಡಿರುವುದಾಗಿ ತಿಳಿದುಬಂದಿದ್ದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ರಕ್ಷಿತ್, ಬೋರಾಶೆಟ್ಟಿ, ವಿನಯ್ ಕುಮಾರ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement: ಆರೋ ಜಾಹಿರಾತಿನಲ್ಲಿ ನಿರ್ದೇಶಕನ ಪಾತ್ರದಲ್ಲಿ ಹೃತಿಕ್ ರೋಷನ್
Hospital visit: ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದ ವಿಜಯ್ ಸಿಂಗ್