Thursday, December 12, 2024

Latest Posts

ನೇಮಕಾತಿ ಅಕ್ರಮದಲ್ಲಿ ಸಿಐಡಿ ಬಲೆಗೆ ಬಿದ್ದ ಪಿಎಸ್ಐ..!

- Advertisement -

ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಶೇಷ ತನಿಖಾ ತಂಡ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಹರೀಶ್ ಅವರನ್ನು ಬುಧವಾರ ಬಂಧಿಸಿದ್ದಾರೆ. ಇದೀಗ 10 ದಿನಗಳ ಕಾಲ ಹರೀಶ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪಿಎಸ್ಐ ಹರೀಶ್ ಅವರನ್ನು ಅಮಾನತು ಮಾಡಲಾಗಿದೆ.

2018ನೇ ಬ್ಯಾಚ್ ನ ಪಿಎಸ್ಐ ಆಗಿರುವ ಕೆ.ಹರೀಶ್, ಪಶ್ಚಿಮ ವಿಭಾಗದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಈ ಮಧ್ಯೆ ಇತ್ತೀಚೆಗೆ ಬಿಡುಗಡೆಯಾದ ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆರ್.ಮಧು ಮತ್ತು ಎನ್.ದಿಲೀಪ್ ಕುಮಾರ್ ಬಳಿ 85 ಲಕ್ಷ ರೂ. ಪಡೆದು ಪಿಎಸ್ಐ ಹುದ್ದೆ ಕೊಡಿಸಿದ್ದರು.

ಮಾಗಡಿ ಮೂಲದ ಮಧು ಮತ್ತು ದಿಲೀಪ್ ಕುಮಾರ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ನೇಮಕಾತಿ ವಿಭಾಗದ ಅಧಿಕಾರಿಗಳ ಜೊತೆ ಮಧ್ಯಸ್ಥಿಕೆ ವಹಿಸಿ ಮತ್ತ ಊರಿನವರೇ ಆದ ಹರೀಶ್ ತಮ್ಮಿಂದ ಹಣ ಪಡೆದುಕೊಂಡು ಕೆಲಸ ಕೊಡಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಈ ಆರೋಪದ ಮೇರೆಗೆ ಪಿಎಸ್ಐ ಹರೀಶ್ ಗೆ ಸಿಐಡಿ ರವರು 3 ಬಾರಿ ನೋಟಿಸ್ ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಹರೀಶ್ ಹೈಕೋರ್ಟ್ ಮೊರೆ ಹೋಗಿ, ತಾವು ಯಾವುದೇ ಅಕ್ರಮದಲ್ಲಿ ಭಾಗಿಯಗಿಲ್ಲ ಆದರೂ ನೋಟಿಸ್ ನೀಡಿದ್ದಾರೆ, ಅದನ್ನು ರದ್ದು ಮಾಡಿ ಅಥವಾ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

ಹೈಕೋರ್ಟ್ ವಿಚಾರಣೆ ನಡೆಸಿ ತನಿಖಾಧಿಕಾರಿಗಳಿಗೆ ಕಾನೂನು ಪ್ರಕಾರ ಕೈಗೊಳ್ಳುವಂತೆ ಸೂಚಿಸಿತ್ತು. ಮತ್ತೊಂದೆಡೆ ಹರೀಶ್ 25 ದಿನಗಳಿಂದ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ತಲೆಮರೆಸಿಕೊಂಡಿದ್ದು, ಇದೀಗ ಹರೀಶ್ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

- Advertisement -

Latest Posts

Don't Miss