- Advertisement -
ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ ಪಿಎಸ್ಐ ನೇಮಕಾತಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಈಗ ಮತ್ತೊಬ್ಬ ಅರೋಪಿ ಅರೆಸ್ಟ್ ಆಗಿದ್ದಾನೆ.
ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದ, ಟಾಪರ್ ಕುಶಾಲ್ ಕುಮಾರ್ ಇಂದು ಅರೆಸ್ಟ್ ಆಗಿದ್ದಾನೆ. ಮೂಲತಃ ಕುಶಾಲ್ ಕುಮಾರ್ ಮಾಗಡಿ ತಾಲೂಕಿನವನು, ಪ್ರಭಲ ರಾಜಕಾರಣಿಯ ಮಗ ಎಂಬುದು ಈಗ ಬೆಳಕಿನ ಬಂದಿದೆ. ದರ್ಶನ್ ಗೌಡನ ಜೊತೆ ಸ್ನೇಹ ಹೊಂದಿದ್ದ ಈ ಕುಶಾಲ್ ಕುಮಾರ್, ಈಗ ಕುಶಾಲ್ ಕುಮಾರ್ ನನ್ನ ಸಿಐಡಿ ಪೊಲೀಸ್ ಬಂಧಿಸಿದ್ದಾರೆ.
ಅಕ್ರಮವಾಗಿ ಪಿಎಸ್ಐ ಪರೀಕ್ಷೆಯಲ್ಲಿ 200 ಕ್ಕೆ 168 ಅಂಕಗಳನ್ನು ಪಡೆದುಕೊಂಡದ್ಧ ಕುಶಾಲ್ ಕುಮಾರ್ ನನ್ನು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಸಿಕ್ಕಿರುವ ಮಾಹಿತಿ ಮೇರೆಗೆ ಇಂದು ಸಿಐಡಿ ಪೊಲೀಸ್ ಅಧಿಕಾರಿಗಳು ಕುಶಾಲ್ ಕುಮಾರ್ ನನ್ನು ಬಂಧಿಸಿದ್ದಾರೆ.
- Advertisement -