ಕಲುಬುರ್ಗಿ: 545 ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದವರ ಬೇಟೆಯನ್ನು ಸಿಐಡಿ ಪೊಲೀಸರು ಮುಂದುವರೆಸಿದ್ದಾರೆ. ಈ ಪ್ರಕರಣ ಸಂಬಂಧ ಅಣ್ತಮ್ಮಾಸ್ ಬಂಧಿಸಿದ್ದಂತ ಸಿಐಡಿ ಅಧಿಕಾರಿಗಳು, ಈಗ ರುದ್ರೇಗೌಡ ಪಾಟೀಲ್ ಎಸ್ಕೇಪ್ ಆಗೋದಕ್ಕೆ ಸಹಕರಿಸಿದಂತ ಮತ್ತೊಬ್ಬ ಕಾಂಗ್ರೆಸ್ ಮುಖಂಡನನ್ನು ಅರೆಸ್ಟ್ ಮಾಡಿದ್ದಾರೆ.
ಅಫಜಲಪುರ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಎಂದು ಹೇಳಲಾಗುತ್ತಿರುವಂತ ಮಲ್ಲುಗೌಡ ಪಾಟೀಲ್ ಎಂಬಾತನನ್ನು ವಶಕ್ಕೆ ಪಡೆದಿರುವಂತ ಸಿಐಡಿ ಪೊಲೀಸರು, ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ ಮತ್ತಷ್ಟು ವಿಚಾರಣೆಗೆ ಆತನನ್ನು ಒಳಪಡಿಸೋ ಸಾಧ್ಯತೆ ಇದೆ.
ನಿನ್ನೆಯಷ್ಟೇ ರುದ್ರೇಗೌಡ ಪಾಟೀಲ್ ಬಂಧನದ ವೇಳೆಯಲ್ಲಿಯೂ ಮಲ್ಲುಗೌಡ ಪಾಟೀಲ್ ಅವರೊಂದಿಗೆ ಇದ್ದರು ಎನ್ನಲಾಗಿದೆ. ರುದ್ರೇಗೌಡ ಪಾಟೀಲ್ ಪಿಎಸ್ಐ ನೇಮಕಾತಿ ಅಕ್ರಮ ಹೊರ ಬರುತ್ತಿದ್ದಂತೆ, ಎಸ್ಕೇಪ್ ಆಗೋದಕ್ಕೆ ಇದೇ ಕಾಂಗ್ರೆಸ್ ಮುಖಂಡ ಮಲ್ಲುಗೌಡ ಪಾಟೀಲ್ ಸಹಕರಿಸಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಈ ಕೇಸ್ ನಲ್ಲಿ ಅವರನ್ನು ಸಿಐಡಿ ಪೊಲೀಸರು ಈಗ ಬಂಧಿಸಿದ್ದಾರೆ.




