ಕಲಬುರ್ಗಿ: ನಿನ್ನೆಯಷ್ಟೇ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಈ ಬಳಿಕ, ಇಂದು ಅವರ ಸಹೋದರ, ರುದ್ರೇಗೌಡ ಪಾಟೀಲ್ ಎಂಬುವರನ್ನು ಬಂಧಿಸಲಾಗಿದೆ. ಈ ಮೂಲಕ ಮತ್ತೊಂಬ್ಬ ಕಿಂಗ್ ಪಿನ್ ಬಂಧನವಾಗಿದೆ.
ರಾಜ್ಯ ಸರ್ಕಾರ 545 ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ತನಿಖೆಯನ್ನು ನಡೆಸೋದಕ್ಕೆ ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಪ್ರಕರಣದಲ್ಲಿ ಹಲವರನ್ನು ಬಂಧಿಸಿರುವಂತ ಸಿಐಡಿ ಪೊಲೀಸರು, ಇಂದು ಮತ್ತೊಬ್ಬ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿದ್ದಂತ ರುದ್ರೇಗೌಡ ಪಾಟೀಲ್ ಎಂಬುವರನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.
ಮತ್ತೊಂದೆಡೆ ಪ್ರಕರಣ ಸಂಬಂಧ ಆಯ್ಕೆ ಪಟ್ಟಿಯಲ್ಲಿರುವಂತ ಅಭ್ಯರ್ಥಿಗಳನ್ನು ಸಿಐಡಿ ಕಚೇರಿಯಲ್ಲಿ ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಿರುವಂತ ಸಿಐಡಿ ಪೊಲೀಸರು, ಇಂದು ಕೂಡ ವಿಚಾರಣೆ ಮುಂದುವರೆಸಿದ್ದಾರೆ.




