ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿಯಿಂದ ಮತ್ತಿಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪಗಳು ಮುಂದುವರೆದಿವೆ. ಈ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳು ತಮ್ಮ ಕೆಲಸ ಚುರುಕುಗೊಳಿಸಿದ್ದಾರೆ. ಇಂದು ಮತ್ತಿಬ್ಬರು ಆರೋಪಿಗಳನ್ನು, ಈ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಓಎಂಆರ್ ಶೀಟ್ ಅನ್ನು ತಿದ್ದುಪಡಿ ಮಾಡಿದ್ದು ದೃಢಪಟ್ಟ ಕಾರಣ, ಇಂದು ಮತ್ತಿಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಿಎಸ್ಐ ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಂತ ರಘುವೀರ್ ಹಾಗೂ ಜಿ.ಸಿ ರಾಘವೇಂದ್ರ ಎಂಬುವರನ್ನು ಬಂಧಿಸಿದ್ದಾರೆ.

ಅಂದಹಾಗೇ ಬಂಧಿತ ರಘುವೀರ್ ಮೊದಲ ಪತ್ರಿಕೆಯಲ್ಲಿ 29 ಅಂಕ, ಎರಡನೇ ಪತ್ರಿಕೆಯಲ್ಲಿ 129 ಅಂಕ ಗಳಿಸಿದ್ದರು. ಮತ್ತೊಬ್ಬ ಜಿ.ಸಿ ರಾಘವೇಂದ್ರ ಮೊದಲ ಪೇಪರ್ ನಲ್ಲಿ 18 ಅಂಕ, 2ನೇ ಪೇಪರ್ ನಲ್ಲಿ 126 ಅಂಕ ಪಡೆದಿದ್ದರು. ಆದ್ರೇ.. ಇವರಿಬ್ಬರ ಓಎಂಆರ್ ಶೀಟ್ ಓರಿಜಿನಲ್ ಹಾಗೂ ಕಾರ್ಬನ್ ಪ್ರತಿಯಲ್ಲಿ ವ್ಯತ್ಯಾಸ ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿತ್ತು. ಹೀಗಾಗಿಯೇ ಇಬ್ಬರನ್ನು ಈಗ ಬಂಧಿಸಲಾಗಿದೆ.

About The Author