ಪಿಎಸ್ಐ ನೇಮಕಾತಿ ಅಕ್ರಮ: ಪ್ರಮುಖ ಆರೋಗಿ ದಿವ್ಯಾ ಹಾಗರಗಿ ಅರೆಸ್ಟ್, ಈ ಬಗ್ಗೆ ಗೃಹ ಸಚಿವರು ಹೇಳಿದ್ದೇನು ಗೊತ್ತಾ.?

ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯೆಂದೇ ಕರೆಯಲಾಗುತ್ತಿದ್ದಂತ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಈ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಏನ್ ಹೇಳಿದ್ರು ಅಂತ ಮುಂದೆ ಓದಿ..

ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದ, ಸಿಒಡಿ ಒಳ್ಳೆ ಟೀಂ ಉತ್ತಮ ಕೆಲಸ ಮಾಡ್ತಿದೆ. ಸಂಪೂರ್ಣವಾದ ತನಿಖೆ ನಡೆಯುತ್ತಿದೆ. ನಿನ್ನೆ ರಾತ್ರಿ ದಿವ್ಯ ಹಾಗರಗಿ ಅವರನ್ನ ಪುನೆಯಲ್ಲಿ ಬಂಧಿಸಲಾಗಿದೆ. ಇವರೆಲ್ಲ ಸೇರಿಕೊಂಡು ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಬಾಯಿಗೆ ಮಣ್ಣು ಹಾಕಿದ್ದಾರೆ. ಇವರ ಹಿಂದೆ ದೊಡ್ಡ ಕೈಗಳು ಇರುವ ಬಗ್ಗೆ ಸಂಶಯ ಇದೆ. ಅದರ ಬಗ್ಗೆ ತನಿಖೆ ಆಗುತ್ತದೆ ಎಂದರು.

ಅಕ್ರಮದಲ್ಲಿ ಭಾಗಿಯಾದವರು ಬೇಲ್ ತಗೊಂಡು ಹೊರಗೆ ಬರಬಾರದು. ಕೋಕಾ ಆಕ್ಟ್ ಹಾಕುವ ಬಗ್ಗೆಯೂ ಚಿಂತನೆ ಮಾಡ್ತಿದ್ದೇವೆ. ಈ ರೀತಿ ಮಾಡದಿದ್ರೆ ನಿಷ್ಢಾವಂತರ ಭವಿಷ್ಯ ಹಾಳಾಗುತ್ತೆದೆ. ಅಮಾಯಕರ ಭವಿಷ್ಯಕ್ಕೆ ಮಣ್ಣು ಹಾಕಿದ್ದಾರೆ. ಅಕ್ರಮ ಎಸಗಿದವರಿಗೆ ಶಿಕ್ಷೆಯಾಗಬೇಕು. ಈ ಹಿಂದೆ ನಡೆದ ಪರೀಕ್ಷಗಳ ಬಗ್ಗೆಯೂ ದಿವ್ಯ ಹಾಗರಗಿ ಅವರು ಭಾಗಿಯಾಗಿದ್ದಾರಾ ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದರು.

ದಿವ್ಯ ಹಾಗರಗಿ ಬಂಧನ ಸ್ವಲ್ಪ ಲೇಟ್ ಆಗಿರಬಹುದು. ಸಿಒಡಿ ತಂಡದವರು ಮೊದಲು ಅವರ ವಿರುದ್ಧ ಸಾಕ್ಷಿಗಳ ಸಂಗ್ರಹ ಮಾಡ್ತಿದ್ರು. ಎಲ್ಲ ಸಾಕ್ಷಿಗಳನ್ನ ಸಂಗ್ರಹಿಸಿ ಅವರನ್ನ ಅರೆಸ್ಟ್ ಮಾಡಿದ್ದಾರೆ. ನಿಷ್ಪಪಕ್ಚಪಾತವಾದ ತನಿಖೆ ನಡೆಯುತ್ತಿದೆ. ಕೆಲವರು ರಾಜಕೀಯ ಲಾಭ ಪಡೆಯಲು ಮುಂದಾದ್ರು. ಈಗ ಅವರ ಪಕ್ಷದವರೇ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

About The Author