ಕಲಬುರ್ಗಿ: 545 ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಸಿಐಡಿ ಪೊಲೀಸರು ಬಂಧಿಸಿದ್ದಂತ ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ಗೆ ಕೋರ್ಟ್ 7 ದಿನ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.
ನಿನ್ನೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ನನ್ನು ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು.
ಸಿಐಡಿ ಮನವಿ ಪುರಸ್ಕರಿಸಿದಂತ ಕಲಬುರ್ಗಿಯ 3ನೇ ಜೆಸಿಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು, ಪಿಎಸ್ಐ ನೇಮಕಾತಿ ಅಕ್ರಮ ಕಿಂಗ್ ಪಿನ್ ಮಹಾಂತೇಶ್ ಪಾಟೀಲ್ ಅವರನ್ನು ಸಿಐಡಿ ವಶಕ್ಕೆ ಏಪ್ರಿಲ್ 29ರವರೆಗೆ 7 ದಿನಗಳ ಕಾಲ ನೀಡಿ ಆದೇಶಿಸಿದೆ.




