ಉತ್ತರಪ್ರದೇಶ:
ಹೌದು ಸ್ನೇಹಿತರೆ ಟ್ರೆಂಡಿಂಗ್ ಆನ್ ಲೈನ್ ಗೇಮ್ ಎಂದರೆ ಪಬ್ಜಿ ಯಾರಿಗೆ ಗೊತ್ತಿಲ್ಲ ಹೇಳಿ . ಇದರಿಂದಾಗಿ ಅದೇಷ್ಟೋ ನವ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಡಿದ್ದಾರೆ. ಅದೆಷ್ಟೋ ಜನರ ಜೀವನ ಬೀದಿ ಪಾಲಾಗಿದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ಪಬ್ ಜಿ ಇಂದ ಶರುವಾಗಿದೆ.
ರಬೂಪೂರಿ ಯುವಕನೊಬ್ಬ ಪಬ್ ಜಿಯನ್ನ ಆನ್ಲೈನ್ ನಲ್ಲಿ ಆಡುತಿದ್ದನು ಪ್ರತಿದಿನ ಆಡುವಾಗ ಅಚಾನಕಕ್ಕಾಗಿ ಒಂದು ಹುಡುಗಿಯ ಪರಿಚಯವಾಗಿದೆ. ಅಂದಹಾಗೆ ಅವಳೆನು ಅದೇ ಊರಿನವಳಲ್ಲ ದೂರದ ಪಾಕಿಸ್ಥಾನದವಳು ಗ್ರೇಟ ನೊಯ್ಡಾ ಮತ್ತು ಪಾಕಿಸ್ಥಾನದಿಂದ ಮೂರು ದೇಶದ ಗಡಿಗಳನ್ನು ದಾಟಿ ಪ್ರಿಯಕರನನ್ನು ಸೇರಿದ್ದಾಳೆ . ಅಂದಹಾಗರೆ ಅವಳೆನು ಕಾಲೆಜು ಯುವತಿಯಲ್ಲ ಬದಲಿಗೆ ನಾಲ್ಕು ಮಕ್ಕಳ ತಾಯಿ
ನಾಲ್ಕು ಮಕ್ಕಳ ತಾಯಿ ಮತ್ತು ಯುವಕನ ಮದ್ಯೆ ಪ್ರೇಮಾಂಕುರವಾಗಿ ಮೆ 13 ರಂದು ಪಾಕಿಸ್ಥಾನ ತೊರೆದು ಉತ್ತರಪ್ರದೇಶದ ಗ್ರೇಟ್ ನೋಯ್ಡಾಗೆ ಬಂದು ತಲುಪಿದ್ದಾಳೆ ಅಲ್ಲಿ ಉತ್ತರಪ್ರದೇಶದ ಗ್ರೇಟ್ ನೋಯ್ಡಾದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ವಾಸವಾಗಿದ್ದಾರೆ. ಮಹಿಳೆ ಪಾಕಿಸ್ತಾನಿ ಎಂಬ ಸುಳಿವು ಸಿಕ್ಕಾಗ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ಸಹಾಯದಿಂದ ಅವಳಿರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ.ಮೇ ತೀಂಗಳಲ್ಲಿ ಮಹಿಳೆ ಭಾರತಕ್ಕೆ ಬಂದಿದ್ದಾಳೆಂದು ತೋರುತ್ತದೆ. ಪೋಲಿಸರನ್ನು ಮೂರು ತಂಡಗಳನ್ನು ರಚಿಸಿ ಅಕ್ರಮ ಪ್ರವೇಶ ಮಾಡಿರುವ ಪಾಕಿಸ್ಥಾನಿ ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಹಿಳೆಯ ಹೆಸರು ಸೀಮಾ ಎಂದು ತಿಳಿಸಿದ್ದಾಳೆ. ಪಬ್‌ಜಿ ಮೂಲಕ ಸಚಿನ್‌ನನ್ನು ಭೇಟಿಯಾಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಈ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.