ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತನ ಹತ್ಯ

www.karnatakatv.net : ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಡ್ಯಾನಿಶ್ ಇಂಡಿಯಾದ ಮುಖ್ಯ ಛಾಯಾಗ್ರಾಹಕರಾಗಿದ್ದರು,  ಅಫ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾಗಿದ್ದಾರೆ. ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯನ್ನು ವಿವರಿಸುವ ವರದಿ ಚಿತ್ರಿಸಿದ್ದರು ಎಂದು ಅಫಘಾನ್ ಸುದ್ದಿ ಚಾನೆಲ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಪಾಕಿಸ್ತಾನದೊಂದಿಗಿನ ಪ್ರಮುಖ ಗಡಿ ಕಾಯುವಿಕೆ ಹಿಂಪಡೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಅಫ್ಘಾನ್ ಪಡೆಗಳು ಸ್ಪಿನ್ ಬೋಲ್ಡಾಕ್ ನಲ್ಲಿ ತಾಲಿಬಾನ್ ಹೋರಾಟಗಾರರೊಂದಿಗೆ ಘರ್ಷಣೆ ನಡೆಸಿವೆ ಎಂದು ಎಎಫ್ ಪಿ ವರದಿ ಮಾಡಿದೆ.

2018 ರಲ್ಲಿ, ಸಿದ್ದಿಕಿ ಮತ್ತು ಅವರ ಸಹೋದ್ಯೋಗಿ ಅಡ್ನಾನ್ ಅಬಿಡಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಸಮಸ್ಯೆ ಚಿತ್ರಿಸಿದ್ದಕ್ಕಾಗಿ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರೆನಿಸಿದ್ದರು. ಹಾಂಗ್ ಕಾಂಗ್‌ನಲ್ಲಿ ನಡೆದ 2019-2020 ಪ್ರತಿಭಟನೆಗಳನ್ನೂ ತಮ್ಮ ಕ್ಯಾಮೆರಾದಲ್ಲಿ ದಾಖಲಿಸಿದ್ದರು.

About The Author