ಸಂಸದೆ ಸೀರೆಗೆ ಬೆಂಕಿ…! ಆಗಿದ್ದೇನು..?!

National News:

ಪುಣೆಯ ಹಿಂಜೆವಾಡಿಯಲ್ಲಿ ಕರಾಟೆ ಸ್ಪರ್ಧೆಯ ಉದ್ಘಾಟನೆ ಭಾನುವಾರ ಆಯೋಜಿಸಲಾಗಿತ್ತು. ಈ ವೇಳೆ ಬಾರಾಮತಿಯ ಎಮ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಬೆಂಕಿ ತಗುಲಿದೆ. ವೇದಿಕೆಯಲ್ಲಿ ಮೇಜಿನ ಮೇಲಿರಿಸಲಾಗಿದ್ದ ದೀಪಕ್ಕೆ ಅವರ ಸೀರೆ ತಾಗಿದ್ದು, ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಸಂಸದೆ ಸುಪ್ರಿಯಾ ತಮ್ಮ ಕೈಗಳಿಂದ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಅಚಾನಕ್ ಆಗಿ ಸೀರೆಗೆ ಬೆಂಕಿ ಹೊತ್ತಿಕೊಂಡಿತು. ಕೂಡಲೇ ಅದನ್ನು ನಂದಿಸಲಾಗಿದ್ದು, ತಾನು ಸುರಕ್ಷಿತವಾಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ :– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಕೊಡುಗೆ: ಕಾದು ನೋಡಿ: ಸಿಎಂ ಬೊಮ್ಮಾಯಿ

ಕೇಂದ್ರ ರಕ್ಷಣಾ‌ ಸಚಿವ ರಾಜನಾಥ್ ಸಿಂಗ್ ಅವರು‌ ಬೆಂಗಳೂರಿಗೆ ಆಗಮನ

About The Author