- Advertisement -
www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನಕ್ಕೆ ಇಡೀ ಕರುನಾಡಷ್ಟೇ ಅಲ್ಲ, ದೇಶದ ಗಣ್ಯಾತಿಗಣ್ಯರು ಕಂಬನಿಗರೆದಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಅಪ್ಪು ಅಭಿಮಾನಿಯೊಬ್ಬರು ಪುನೀತ್ ನಟನೆಯ ಚಿತ್ರದ ಹಾಡುಗಳನ್ನು ಹಾಡೋ ಮೂಲಕ ಅವರಿಗೆ ಗಾನ ನಮನ ಸಲ್ಲಿಸಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪಾಕಿಸ್ತಾನದ ಲಾಹೋರ್ ಮೂಲದ ಯುವಕನೊಬ್ಬ ಕನ್ನಡದ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಮತ್ತು ಮಿಲನ ಚಿತ್ರದ ನಿನ್ನಂದಲೇ ಹಾಡನ್ನು ಸುಲಲಿತವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈ ಯುವಕ ಕನ್ನಡ ಭಾಷೆ ತಿಳಿಯದಿದ್ದರೂ ಅಪ್ಪು ನಟನೆಯ ಕನ್ನಡದ ಹಾಡುಗಳನ್ನ ಹಾಡಿರೋದು ಕಲೆಗೆ ಯಾವ ಭಾಷೆ ಬೇಕಾಗಿಲ್ಲ ಅನ್ನೋ ಸಂದೇಶವನ್ನ ಸಾರಿ ಹೇಳಿದಂತಿದೆ.
- Advertisement -