www.karnatakatv.net: ತಾವು ಹುಟ್ಟಿದ 9ನೇ ತಿಂಗಳಲ್ಲಿಯೇ ಚಿತ್ರರಂಗ ಪ್ರವೇಶಿಸಿದ್ದ ನಟ ಪುನೀತ್ ರಾಜ್ ಕುಮಾರ್ 49 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ 29 ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ.
ತಮ್ಮ ನಟನೆ, ಡ್ಯಾನ್ಸ್ ಶೈಲಿ, ವಿನಯತೆಯಿಂದ ಕರುನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಅಪ್ಪು ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಹೊಸ ಪ್ರತಿಭೆಗಳನ್ನು ಹುರಿದುಂಬಿಸುತ್ತಿದ್ರು. ಹೊಸಬರ ಸಿನಿಮಾಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿದ್ದ ಅಪ್ಪು, ಆಡಿಯೋ ರಿಲೀಸ್ ಕಾರ್ಯಕ್ರಮಗಳಿಗೆ ಹಾಜರಾಗೋ ಮೂಲಕ ಅವರ ಬೆಂಬಲಕ್ಕೆ ನಿಲ್ಲುತ್ತಿದ್ರು. ಇನ್ನು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಹುಟ್ಟು ಹಾಕಿದ್ದು ಇದೇ ಕಾರಣಕ್ಕೆ. ಹೌದು 2019ರಲ್ಲಿ ತಮ್ಮ ಬ್ಯಾನರ್ನಲ್ಲಿ ಕವಲುದಾರಿ ಅನ್ನೋ ಸಿನಿಮಾವನ್ನು ನಿರ್ಮಿಸಿದ್ದರು. 2020ರಲ್ಲಿ ಮಾಯಾಬಜಾರ್ 2016 ಎಂಬ ಎರಡನೇ ಸಿನಿಮಾಗೂ ಹಣ ಹೂಡಿದ್ದರು. ಇದಾದ ನಂತರ ಲಾ ಹಾಗೂ ಫ್ರೆಂಚ್ ಬಿರಿಯಾನಿ ಎಂಬ ಸಿನಿಮಾಗಳು ಪುನೀತ್ ಬ್ಯಾನರ್ನಲ್ಲಿ ರೆಡಿಯಾಗಿತ್ತು. ಕೊರೋನಾದಿಂದಾಗಿ ಈ ಸಿನಿಮಾಗಳು ಓಟಿಟಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದವು.
ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಪಿಆರ್ ಕೆ ಪ್ರೊಡಕ್ಷನ್ ನಿಂದಲೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡೋದಾಗಿಯೂ ಪುನೀತ್ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ರು. ಈ ಚಿತ್ರದಲ್ಲೂ ಹೊಸಬರಿಗೆ ಅವಕಾಶ ನೀಡೋದಾಗಿ ಅಪ್ಪು ಪ್ಲಾನ್ ಮಾಡಿದ್ರು. ಆದ್ರೆ, ಇಷ್ಟರಲ್ಲೇ ವಿಧಿ ತನ್ನ ಆಟವಾಡಿದೆ. ನಾಡಿನ ಶ್ರೇಷ್ಠ ನಟನನ್ನು ವಿಧಿ ತನ್ನ ವಶಕ್ಕೆ ತೆಗೆದುಕೊಂಡಿದೆ.