ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್..!

www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಂತ್ಯಕ್ರಿಯೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

ಅಂತಿಮ ವಿಧಿವಿಧಾನಗಳನ್ನು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನೆರವೇರಿಸಿದ್ರು. ಈಡಿಗ ಸಂಪ್ರದಾಯದoತೆ ಅಂತ್ಯಕ್ರಿಯೆ ನಡೆಯಿತು. ಕಂಠೀರವ ಸ್ಟುಡಿಯೋದಲ್ಲಿ ತಮ್ಮ ತಂದೆತಾಯಿಯಾ ಡಾ. ರಾಜ್ ಕುಮಾರ್ , ಮತ್ತು ಪಾರ್ವತಮ್ಮನವರ ಸಮಾಧಿಯ ಪಕ್ಕದಲ್ಲೇ ಪುನೀತ್ ರ ಅಂತ್ಯಸoಸ್ಕಾರ ನಡೆಯಿತು. ಆ ಮೂಲಕ ಸ್ಯಾಂಡಲ್ ವುಡ್ ನ ಅತ್ಯದ್ಭುತ ನಟ ಪುನೀತ್ ಮಣ್ಣಲ್ಲಿ ಮಣ್ಣಾಗಿದ್ದಾರೆ ಕುಟುಂಬಸ್ಥರು, ರಾಜಕೀಯ ಗಣ್ಯರು ಮತ್ತು ಅಪಾರ ಅಭಿಮಾನಿಗಳು ಅಪ್ಪು ಅಂತ್ಯಕ್ರಿಯೆ ಸಾಕ್ಷಿಯಾದ್ರು.

About The Author