www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನಾಳೆ ನೆರವೇರಲಿದೆ. ನಾಳೆ ಬೆಳಗ್ಗೆ 6 ಗಂಟೆಯಿoದಲೇ ಪಾರ್ಥಿವ ಶರೀರದ ಮೆರವಣಿಗೆ ನೆಡಯಲಿದೆ. ಪಾರ್ಥಿವ ಶರೀರ ಹೊತ್ತ ವಾಹನ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ.
ಬೆಂಗಳೂರಿನ ಲಗ್ಗೆರೆ ರಿಂಗ್ ರೋಡ್ ಬಳಿಯಿಂದ ಹೊರಡಲಿರುವ ಮೆರವಣಿಗೆ, ಕಾರ್ಪೊರೇಷನ್ ಬ್ಯಾಂಕ್, ಮೈಸೂರು ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇವಸ್ಥಾನ, ಯಶವಂತಪುರ, ಗೋವರ್ಧನ್ ಥಿಯೇಟರ್, ಆರ್ ಎಂಸಿ ಯಾರ್ಡ್, ಗೊರಗುಂಟೆ ಪಾಳ್ಯದ ಮಾರ್ಗವಾಗಿ ಸಾಗಿ ಕಡೆಗೆ ಕಂಠೀರವ ಸ್ಟುಡಿಯೋ ತಲುಪಲಿದೆ.
ಬಳಿಕ ಬೆಳಗ್ಗೆ 10.30ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ರವರ ಅಂತ್ಯ ಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಇನ್ನು ಇಂದು ಅಂತ್ಯಕ್ರಿಯೆಗೆ ನಿರ್ಧರಿಸಿದ್ದ ಕುಟುಂಬಸ್ಥರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಂತಿಮ ದರ್ಶನಕ್ಕೆ ಬರುತ್ತಿದ್ದರಿಂದ ನಾಳೆಗೆ ಮುಂದೂಡಿದ್ರು. ಹೀಗಾಗಿ ಲಕ್ಷಾಂತರ ಮಂದಿ ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ರವರನ್ನು ಕಡೆಯ ಬಾರಿಗೆ ನೋಡುವ ಅವಕಾಶ ಸಿಕ್ಕಂತಾಗಿದೆ.