Sunday, September 8, 2024

Latest Posts

ಗುರು ರವಿದಾಸ್ ಜಯಂತಿಯ ಪ್ರಯುಕ್ತ ಪಂಜಾಬ್ ಚುನಾವಣೆ ಮುಂದೂಡಿಕೆ

- Advertisement -

ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಫೆಬ್ರವರಿ 14 ಕ್ಕೆ ಚುನಾವಣಾ ಆಯೋಗ ಘೋಷಣೆ ಮಾಡಿತ್ತು,ಆದರೆ ಇದೀಗ 117 ಕ್ಷೇತ್ರಗಳಿಗೂ ಸಹ 6ದಿನ ಮುಂದೂಡಿದೆ. ಫೆ.20 ರಂದು ಮತದಾನ ನಡೆಯಲಿದೆ ಎಂದು ಘೋಷಿಸಿದೆ.
ಪಂಜಾಬ್‌ನಲ್ಲಿ ಗುರು ರವಿದಾಸ್ ಜಯಂತಿ ಫೆ.16 ಕ್ಕೆ ಇದೆ. ಜೊತೆಗೆ ಶೇ 32 ರಷ್ಟು ಪರಿಶಿಷ್ಟ ಜಾತಿ ಸಮುದಾಯದವರು ಪಂಜಾಬ್‌ನಲ್ಲಿ ಇದ್ದಾರೆ.
ಈ ಜನರು ಮತ್ತು ರಾಜಕೀಯದ ಬಹುತೇಕರು ಗುರು ರವಿದಾಸ್ ಅವರ ಅನುಯಾಯಿಗಳು. ಅವರ ಜನ್ಮದಿನದ ಹಿನ್ನಲೆ ಪಂಜಾಬ್‌ನ ಲಕ್ಷಾಂತರ ಮಂದಿ ಉತ್ತರಪ್ರದೇಶದ ಬನಾರಸ್‌ಗೆ ತೆರಳಿ ಗುರು ಜಯಂತಿ ಆಚರಿಸುತ್ತಾರೆ. ಬಹುತೇಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಹಾಗಾಗಿ ಚುನಾವಣಾ ಆಯೋಗಕ್ಕೆ ಹಲವಾರು ನಾಯಕರು ಚುನಾವಣೆ ಮುಂದೂಡಿ ಎಂದು ಪತ್ರ ಬರೆದಿದ್ದರು. ಈ ಮನವಿ ಪರಿಗಣಿಸಿದ ಚುನಾವಣಾ ಆಯೋಗ. ,ಮತದಾನದ ದಿನಾಂಕ ಬದಲಿಸಿದೆ.

- Advertisement -

Latest Posts

Don't Miss