ಚಂಢೀಗಢ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಆರು ವರ್ಷಗಳ ನಂತರ ಡಾ ಗುರುಪ್ರೀತ್ ಕೌರ್ ಅವರನ್ನು ಖಾಸಗಿ ಸಮಾರಂಭದಲ್ಲಿ ನಾಳೆ ವಿವಾಹವಾಗಲಿದ್ದಾರೆ.
ಗುರುವಾರದಂದು ವಿವಾಹ ಸಮಾರಂಭ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಬಂಧುಗಳು ಭಾಗವಹಿಸಲಿದ್ದಾರೆ. ಸಿಎಂ ಭಗವಂತ್ ಮಾನ್ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ವಿವಾಹ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಗವಂತ್ ಮಾನ್ ಅವರ ಮೊದಲ ಮದುವೆಯ ಆರು ವರ್ಷಗಳ ಹಿಂದೆ ಕೊನೆಗೊಂಡಿತು. ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಸ್ತುತ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ತಂದೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅವರಿಬ್ಬರೂ ಮಕ್ಕಳೂ ಬಂದಿದ್ದರು.
ವರದಿಯ ಪ್ರಕಾರ, ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ ವಧುವನ್ನು ಆಯ್ಕೆ ಮಾಡಿದ್ದಾರೆ. ಭಗವಂತ್ ಮಾನ್ ಅವರ ಮೊದಲ ಮದುವೆ ಇಂದ್ರಪ್ರೀತ್ ಕೌರ್ ಅವರೊಂದಿಗೆ ಆಗಿತ್ತು. ಭಗವಂತ್ ಮಾನ್ ಅವರ ಮಗ, ದಿಲ್ಶನ್ ಮಾನ್ (17) ಮತ್ತು ಮಗಳು ಸೀರತ್ ಕೌರ್ ಮಾನ್ (21) ತಮ್ಮ ತಾಯಿಯೊಂದಿಗೆ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ.
ಮಾರ್ಚ್ 2015 ರಲ್ಲಿ, ಭಗವಂತ್ ಮಾನ್ ಮತ್ತು ಇಂದರ್‌ಪ್ರೀತ್ ಕೌರ್ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.