www.karnatakatv.net :ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆಯನ್ನು ನೀಡಿದ ಬೆನ್ನಲ್ಲೇ ನೂತನ ಸಿಎಂ ಆಗಿ ಚರಂಜಿತ್ ಸಿಂಗ್ ಚನ್ನಿರನ್ನು ಆಯ್ಕೆಮಾಡಲಾಗಿದೆ.
ಕಾಂಗ್ರೆಸ್ ನ ಹೈಕಮಾಂಡ್ ಜೋತೆ ಚರ್ಚೆಯನ್ನು ನಡೆಸಿ ಬಹುಜನರು ಸುಖ್ ಜಿಂದರ್ ರಾಂಧವ ಹೆಸರನ್ನು ಸೂಚಿಸಲಾಗಿತ್ತು ಆದರೆ ಅಚ್ಚರಿಯಂತೆ ರಾಜಕೀಯ ಬೇಳವಣಿಗೆಯೊಂದರಲ್ಲಿ ಚರಂಜಿತ್ ಸಿಂಗ್ ಚನ್ನಿರನ್ನು ಆಯ್ಕೆಮಾಡಲಾಗಿದೆ. ನದೆಹಲಿಯಲ್ಲಿ ಎಐಸಿಸಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಿರಿಯ ನಾಯಕಿ ಸೋನಿ ನೇತೃತ್ವದಲ್ಲಿ ಚರ್ಚೆ ನಡೆಸಿದರು. ಪಂಜಾಬಿನ ಸಿಎಂ ಯಾರಾಗಬೇಕು ಎಂದು ಶಾಸಕರ ಅಭಿಪ್ರಾಯ ಕೇಳಿದಾಗ, ಎಲ್ಲಾ ಕಾಂಗ್ರೆಸ್ ಶಾಸಕರು ಸೇರಿ ಸುಖ್ ಜಿಂದರ್ ರಾಂಧವ ಅವರನ್ನು ಆಯ್ಕೆಮಾಡಲಾಗಿತ್ತು.
ಎಲ್ಲರಿಗೂ ರಾಂಧವ ಸಿಎಂ ಆಗುತ್ತಾರೆ ಎಂದು ಕೂತುಹಲದಿಂದ ಕಾತುಕುಳಿತವರಿಗೆ ಅಚ್ಚರಿಯೊಂದು ಕಾದಿದ್ದು, ಆದರೆ ಹೈಕಮಾಂಡ್ ಎಲ್ಲರಿಗೂ ಶಾಕ್ ನೀಡಿ ಅದರ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಹರೀಶ್ ರಾವತ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಹಾಗೇ ಚರಂಜಿತ್ ಸಿಂಗ್ ಚನ್ನಿ ಮುಂದಿನ ಪಂಜಾಪ್ ಸಿಎಂ ಆಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.