Friday, October 18, 2024

Latest Posts

ಮೋದಿಗೆ ಭೇಟಿಯಾದ ಪಂಜಾಬ್ ನೂತನ ಸಿಎಂ..!

- Advertisement -

www.karnatakatv.net : ಪಂಜಾಬ್ ನೂತನ ಮುಖ್ಯ ಮಂತ್ರಿ ಯಾಗಿ ಆಯ್ಕೆಯಾದ ಚರಣ್ ಜಿತ್ ಸಿಂಗ್ ಚೆನ್ನಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಚನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ  ನಂತರ ಇದೇ ಮೊದಲ ಬಾರಿಗೆ ಮೋದಿಗೆ ಭೇಟಿಯಾಗಿದ್ದಾರೆ, ಭೇಟಿಯಾದ  ಬಳಿಕ ಮಾತನಾಡಿದ ಚನ್ನಿ, ಪ್ರತಿಭಟನಾ ನಿರತ ರೈತರೊಂದಿಗೆ ಮತ್ತೆ ಮಾತುಕತೆ ನಡೆಸುವಂತೆ ಕೋರಿದ್ದೇನೆ, ಹಾಗೇ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿರುವೆ ಎಂದು ಹೇಳಿದರು.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ವರ್ಷ ನವೆಂಬರ್‌ನಿಂದ ದೆಹಲಿಯ ಗಡಿ ಭಾಗಗಳಲ್ಲಿ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿದ್ದಾರೆ.

ಸಾಮಾನ್ಯವಾಗಿ ಪಂಜಾಬ್‌ನಲ್ಲಿ ಭತ್ತ ಖರೀದಿ ಪ್ರಕ್ರಿಯೆಯು ಅಕ್ಟೋಬರ್‌ 1ರಂದು ಆರಂಭವಾಗುತ್ತದೆ. ಆದರೆ, ಈ ವರ್ಷ ಕೇಂದ್ರ ಸರ್ಕಾರವು ಅಕ್ಟೋಬರ್‌ 10ರಿಂದ ಆರಂಭಿಸಲು ನಿರ್ಧರಿಸಿದೆ. ಕೂಡಲೇ ಖರೀದಿ ಪ್ರಕ್ರಿಯೆ ಶುರು ಮಾಡುವಂತೆ ಮನವಿ ಮಾಡಿರುವೆ ಎಂದು ಚನ್ನಿ ತಿಳಿಸಿದರು.

- Advertisement -

Latest Posts

Don't Miss