ಸಾಮಾನ್ಯವಾಗಿ ಸೆಲೆಬ್ರೆಟಿಗಳನ್ನ ಆರಾಧಿಸುವ ಸಂಖ್ಯೆ ಹೆಚ್ಚು. ಆದ್ರೆ ಅಂತಹ ಸೆಲೆಬ್ರೆಟಿಗಳಿಗೂ ತಮ್ಮ ಫೇವರೆಟ್ ವ್ಯಕ್ತಿಗಳು ಇರುತ್ತಾರೆ ಎಂದರೆ ನಂಬ್ತಿರಾ…ನಂಬಲೇಬೇಕು. ಯಸ್ ನಾನಿಲ್ಲಿ ಹೇಳುತ್ತಿರುವ ವಿಷ್ಯ ಖ್ಯಾತ ಕತೆಗಾರ ವಿಜಯೇಂದ್ರ ಪ್ರಸಾದ್ ಅವರದ್ದು. ಅವರನ್ನ, ಅವರ ಬರಹವನ್ನ, ಅವರ ಸರಳತೆಯನ್ನ ಯಾರು ಇಷ್ಟ ಪಡುವುದಿಲ್ಲ ಹೇಳಿ. ಆದ್ರೆ ವಿಜಯೇಂದ್ರ ಪ್ರಸಾದ್‌ಗೂ ತಮ್ಮ ಇಷ್ಟದ ನಿರ್ದೇಶಕ ಇದ್ದಾರೆ ಎಂದ್ರೆ ನಂಬಲೇಬೇಕು. ಹಾಗಾದ್ರೆ ಅವರ ಇಷ್ಟವಾದ ನಿರ್ದೇಶಕ ಯಾರು?
ಸಿನಿಮಾ ಅನ್ನುವುದೇ ಹಾಗೆ ಇಲ್ಲಿ ಯಾರು ಯಾರಿಗೆ ಬೇಕಾದರೂ ಇಷ್ಟ ಆಗುತ್ತಾರೆ. ಅದು ಪ್ರತಿಭೆ ಇರಬಹುದು ಅಥವಾ ರೂಪವೇ ಇರಬಹುದು.. ಅಂತಹ ಒಂದು ಪ್ರತಿಭಾವಂತ ನಿರ್ದೇಶಕ ಖ್ಯಾತ ಕತೆಗಾರ ವಿಜಯೇಂದ್ರ ಪ್ರಸಾದ್‌ಗೂ ಇಷ್ಟ. ಬಣ್ಣದ ಲೋಕದ ಹಿಟ್ ನಿರ್ದೇಶಕ, ಸೋಲೆ ಕಾಣದ ಸರದಾರ, ರಾಜಾಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ಗೆ ತಮ್ಮ ಪುತ್ರ ರಾಜಮೌಳಿಯ ಡೈರೆಕ್ಷನ್‌ಗಿಂತಲೂ , ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನವೆಂದರೆ ತುಂಬಾ ಇಷ್ಟವಂತೆ. ಪುರಿ ಜಗನ್ನಾಥ್ ತೆಲುಗಿನ ಪ್ರತಿಭಾವಂತ ನಿರ್ದೇಶಕರಲ್ಲಿ ಪ್ರಮುಖರು. ಆದ್ರೆ ಪುರಿ ಜಗನ್ನಾಥನ ‘ಲೈಗರ್’ ಸಿನಿಮಾ ಹೀನಾಯ ಸೋಲನ್ನ ಕಂಡಾಗ ವಿಜಯೇಂದ್ರ ಪ್ರಸಾದ್ ಹೇಳಿದ್ದ ಮಾತನ್ನ ಪುರಿ ಜಗನ್ನಾಥ್ ನೆನೆಸಿಕೊಂಡಿದ್ದಾರೆ. ಪುರಿ ಜಗನ್ನಾಥ್ ಸಿನಿಮಾ ಹೀನಾಯವಾಗಿ ಸೋತಾಗ, ವಿಜಯೇಂದ್ರ ಪ್ರಸಾದ್ ತಮ್ಮ ಬಳಿ ಹೇಳಿದ್ದ ಮಾತನ್ನು ಪುರಿ ನೆನಪು ಮಾಡಿಕೊಂಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹಿಟ್ ಮೇಲೆ ಹಿಟ್ ನೀಡಿರುವ ರಾಜಮೌಳಿಗೂ ಪ್ರತಿ ಸ್ಪರ್ಧಿಗಳಿದ್ದಾರೆ ಎಂದರೆ ನಂಬುವುದು ಕಷ್ಟ. ಆದ್ರೆ ಹೌದು ರಾಜಮೌಳಿಗೂ ಇಬ್ಬರು ಪ್ರತಿಸ್ಪರ್ಧಿ ನಿರ್ದೇಶಕರಾಗಿದ್ದಾರೆ. ಪುರಿ ಜಗನ್ನಾಥ್ ಹಾಗೂ ತ್ರಿವಿಕ್ರಮ್. ಇನ್ನು ರಾಜಮೌಳಿಯ ಎಲ್ಲಾ ಸಿನಿಮಾಗಳಿಗೆ ಕತೆ ಬರೆಯುವ ಅವರ ತಂದೆ ವಿಜಯೇಂದ್ರ ಪ್ರಸಾದ್‌ಗೆ ತಮ್ಮ ಪುತ್ರನ ನಿರ್ದೇಶನಕ್ಕಿಂತಲೂ ಪುರಿ ಜಗನ್ನಾಥ್ ಅವರ ನಿರ್ದೇಶನವೆಂದರೆ ಅಂದ್ರೆ ತುಂಬಾ ಇಷ್ಟವಂತೆ.
ಆದರೆ ಪುರಿ ಜಗನ್ನಾಥ್ರ ಈ ಹಿಂದಿನ ಸಿನಿಮಾ ಹೀನಾಯ ಸೋಲು ಕಂಡಿತು. ಆ ಸಮಯದಲ್ಲಿ ವಿಜಯೇಂದ್ರ ಪ್ರಸಾದ್‌ಗೆ ಪುರಿ ಜಗನ್ನಾಥ್ ಕರೆ ಮಾಡಿ ಒಂದೊಳ್ಳೆ ಸಲಹೆ ನೀಡಿದ್ದರು ಎಂದು ಸ್ವತಃ ಪುರಿ ಜಗನ್ನಾಥ್ ಹೇಳಿಕೊಂಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶಿಸಿರುವ ಹೊಸ ಸಿನಿಮಾ ‘ಡಬಲ್ ಇಸ್ಮಾರ್ಟ್’ ಆಗಸ್ಟ್ 15 ರಂದು ತೆರೆ ಕಾಣಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಇತ್ತೀಚೆಗಷ್ಟೆ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪುರಿ ಜಗನ್ನಾಥ್, ‘ಲೈಗರ್’ ಸಿನಿಮಾ ಪ್ಲಾಪ್ ಆಗಿದ್ದನ್ನ ನೆನೆಸಿಕೊಂಡರು. ‘ಲೈಗರ್’ ಸಿನಿಮಾ ಫ್ಲಾಪ್ ಆಗಿ ನಾವು ಬೇಸರದಲ್ಲಿದ್ದಾಗ ಒಂದು ವಾರದ ಬಳಿಕ ನನಗೆ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಕರೆ ಮಾಡಿ,ನೀವು ನನಗೆ ಒಂದು ಸಹಾಯ ಮಾಡಬೇಕು ಎಂದು ಕೇಳಿಕೊಂಡರು. ‘ನೀವು ಅಪಾರ ಪ್ರತಿಭೆ ಇರುವ ನಿರ್ದೇಶಕ, ನಿಮ್ಮಂಥಹಾ ನಿರ್ದೇಶಕರು ಸೋಲುವುದನ್ನು ನನ್ನಿಂದ ನೋಡಲಾಗುವುದಿಲ್ಲ. ಮುಂದಿನ ಬಾರಿ ಸಿನಿಮಾ ತೆಗೆಯಲು ಮುಂದಾದಾಗ ದಯವಿಟ್ಟು ಆ ಕತೆಯನ್ನು ನನಗೆ ಒಮ್ಮೆ ತೋರಿಸಿ, ಎಲ್ಲರೂ ಸೇರಿ ಸಣ್ಣ-ಪುಟ್ಟ ಕೊರತೆಗಳನ್ನು ಸರಿ ಮಾಡೋಣ’ ಎಂದಿದ್ದರು ಅಂತ ಪುರಿ ಜಗನ್ನಾಥ್ ನೆನಪು ಮಾಡಿಕೊಂಡು ಭಾವುಕರಾದರು.
ಅವರ ಹೆಸರಾಂತ ಕತೆಗಾರ, ಅದಷ್ಟೇ ಅಲ್ಲದೆ ಅವರ ಮಗ ಖ್ಯಾತ ನಿರ್ದೇಶಕ ಆದ್ರೂ ಕೂಡ ಅವರು ತಾವಾಗಿಯೇ ಕರೆ ಮಾಡಿ ಕಾಳಜಿ ತೋರಿಸಿದ ರೀತಿ ನನ್ನನ್ನು ಎಮೋಶನಲ್ ಆಗುವಂತೆ ಮಾಡಿತು ಎಂದಿದ್ದಾರೆ. ಅವರು ಹೇಳಿದಂತೆ ಕತೆಯನ್ನ ಅವರಿಗೆ ತೋರಿಸಲು ಸಾಧ್ಯವಾಗಿಲ್ಲವಾದರೂ ಈ ಸಿನಿಮಾವನ್ನ ಬಹಳ ಎಚ್ಚರಿಕೆಯಿಂದ ಮೈಯೆಲ್ಲಾ ಕಣ್ಣಾಗಿ ನಿರ್ಮಾಣ ಮಾಡಿದ್ದೇವೆ.
*ಸ್ವಾತಿ. ಎಸ್.