ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ ಪುಷ್ಪ ತೆರೆಗೆ ಬರಲು ರೆಡಿಯಾಗ್ತಿದೆ. ಶೂಟಿಂಗ್ ಕಂಪ್ಲೀಟ್ ಆಗದೆ ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಅಲ್ಲು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈಗಾಗ್ಲೇ ಸೌತ್ ಇಂಡಸ್ಟ್ರೀಯಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ ನಿಂತಿವೆ. ಬೇರೆ ಸಿನಿಮಾಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಜೊತೆಗೆ ತಮಗೆ ಯಾರು ಕಾಂಪಿಟೇಷನ್ ಕೊಡದ ರೀತಿಯಲ್ಲಿ ಮುಂಚಿತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿ ಆ ಡೇಟ್ ಲಾಕ್ ಮಾಡಿಕೊಳ್ತಿದ್ದಾವೆ ಚಿತ್ರತಂಡಗಳು.
ಈಗಾಗ್ಲೇ ರಾಜಮೌಳಿಯ RRR ಸಿನಿಮಾ ಹಾಗೂ ರಜನಿಕಾಂತ್ ಅಣ್ಣಾತ್ತೆ ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ ಕೊಡೋದಿಕ್ಕೆ ಸಜ್ಜಾಗ್ತಿವೆ. ಇದೀಗ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಕೂಡ ರಿಲೀಸ್ ಡೇಟ್ ಘೋಷಿಸಿದೆ.
ಅಲಾವೈಕುಂಠಪುರಂಲೋ’ ಸಿನಿಮಾ ಬಳಿಕ ಅಲ್ಲು ಅರ್ಜುನ್ ನಟಿಸುತ್ತಿರುವ ಚಿತ್ರ ಪುಷ್ಪ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಬಿಲ್ಡ್ ಆಗಿದೆ. ಮೇಕಿಂಗ್ ಹಂತದಲ್ಲಿ ಭಾರಿ ಕುತೂಹಲ ಮೂಡಿಸ್ತಿರೋ ಈ ಸಿನಿಮಾಕ್ಕೆ, ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದು, ಆಗಸ್ಟ್ 13ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.
ಇನ್ನೂ, ಪುಷ್ಪ ಸಿನಿಮಾದಲ್ಲಿ ಸ್ಟೈಲೀಶ ಸ್ಟಾರ್ ಅಲ್ಲು ಅರ್ಜುನ್ ಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ಡಾಲಿ ಧನಂಜಯ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಎಲ್ಲಾರ ನಿರೀಕ್ಷೆಗೂ ಮೀರಿ ಪುಷ್ಪ ರೆಡಿಯಾಗ್ತಿದೆ.