Thursday, October 23, 2025

Latest Posts

ಪುತ್ತೂರು: ಕೆಫೆಯಲ್ಲಿ ಅನ್ಯ ಕೋಮಿನ ಯುವಕ ಯುವತಿಯರು: ಹಿಂದೂ ಸಂಘಟನೆಯಿಂದ ಆಕ್ಷೇಪ

- Advertisement -

Manglore News:

ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಭಿನ್ನ ಕೋಮಿನ ವಾಗ್ವಾದ ಮತ್ತೆ ಬಯಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ  ಪುತ್ತೂರು ತಾಲೂಕಿನಲ್ಲಿ ಮತ್ತೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಯತ್ನ ನಡೆದಿದ್ದು, ಭಿನ್ನ ಕೋಮಿನ ಯುವಕ-ಯುವತಿಯರು ಕೆಫೆಗೆ ಬಂದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ದ.ಕ ಜಿಲ್ಲೆಯ ಪುತ್ತೂರು ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ. ಓರ್ವ ಹಿಂದೂ ಯುವತಿ, ಇಬ್ಬರು ಮುಸ್ಲಿಂ ಯುವಕರು ಹಾಗೂ ಇಬ್ಬರು ಕ್ರಿಶ್ಚಿಯನ್ ಯುವತಿಯರು ಜ್ಯೂಸ್ ಕುಡಿಯಲು ಬಂದಿದ್ದ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು ಕೆಫೆ ಮುಂಭಾಗ ಸೇರಿದ್ದಾರೆ. ಅಲ್ಲದೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪುತ್ತೂರು ನಗರ ಠಾಣೆಗೆ ಹಿಂದೂ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.‌ ತಕ್ಷಣ ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಠಾಣೆ ಎಸ್ಸೈ ಶ್ರೀಕಾಂತ್ ರಾಥೋಡ್ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗೊಂದಲ ಪರಿಸ್ಥಿತಿ ಹಿನ್ನೆಲೆ ಭಿನ್ನ ಕೋಮಿನ ಜೋಡಿ ವಿಚಾರಣೆ ನಡೆಸಿ ಬಳಿಕ ಮನೆಯವರಿಗೆ ‌ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಜನ ಸೇರಿದ್ದ ‌ಕಾರಣ ಕೆಲ ಹೊತ್ತು ಆತಂಕದ ಪರಿಸ್ಥಿತಿ ‌ನಿರ್ಮಾಣವಾಗಿದೆ.

ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ- ಸಚಿವ ಅಶ್ವತ್ಥ ನಾರಾಯಣ

ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು, 8 ನೂತನ ವಿ.ವಿ.ಗಳ ಸ್ಥಾಪನೆ – ಸಚಿವ ಅಶ್ವತ್ಥನಾರಾಯಣ

ಯುವಕರಲ್ಲೇ ಹಾರ್ಟ್ ಅಟ್ಯಾಕ್..! ಕಾರಣವೇನು..?

- Advertisement -

Latest Posts

Don't Miss