Special News:
ಸಾಹಸ ಎನ್ನುವುದು ಮನೋಭಾವಕ್ಕೆ ಸಂಬಂಧಿಸಿದ್ದು. ಇದಕ್ಕೆ ವಯಸ್ಸಿನ ಹಂಗಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ಇದಕ್ಕೆ ಸಾಕ್ಷಿ. 80 ವರ್ಷದ ಅಜ್ಜಿಯು ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಅನ್ನು ಆಕೆಯ ಮೊಮ್ಮಗಳು ಇದೀಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಒಂದು ಮಿಲಿಯನ್ಗಿಂತಲೂ ಹೆಚ್ಚು ಜನ ನೋಡಿದ್ಧಾರೆ. ಆದರೆ ಬೇಸರದ ವಿಷಯವೆಂದರೆ ಈ ಅಜ್ಜಿ ಏಳು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಆದರೂ ಅವರ ನೆನಪು ಮಾತ್ರ ಹೀಗೆ ಈ ವಿಡಿಯೋದ ಮೂಲಕ ಚಿರಾಯುವಾಗಿದೆ ಎಂದು ಹೇಳಿದ್ದಾರೆ ಇವರ ಮೊಮ್ಮಗಳು. ‘ಏಳು ವರ್ಷಗಳ ಹಿಂದೆ ನನ್ನ ಅಜ್ಜಿ ತೀರಿದರು. ನನ್ನ ಫೋನ್ ಗ್ಯಾಲರಿಯಲ್ಲಿ ಈ ವಿಡಿಯೋ ಹಾಗೇ ಇತ್ತು. ಇದನ್ನು ನೋಡಿ ನಾನು ಭಾವುಕಳಾಗುತ್ತಿದ್ದೇನೆ. ನಾನು ನನ್ನ ಅಜ್ಜಿಯನ್ನು ಬಹಳ ಪ್ರೀತಿಸುತ್ತೇನೆ. ಈಗ ಅವಳಿಲ್ಲದಿದ್ದರೂ ಅವಳ ನೆನಪು ನನಗೆ ಸ್ಫೂರ್ತಿಯಾಗಿದೆ. ಪ್ಯಾರಾಗ್ಲೈಡಿಂಗ್ ಮಾಡುವಾಗ ಅಜ್ಜಿ ಸೀರೆ ಉಟ್ಟಿದ್ದರು! ಮತ್ತವರಿಗೆ ಚೂರೂ ಭಯವಿರಲಿಲ್ಲ’ ಎಂದಿದ್ದಾರೆ ಮೊಮ್ಮಗಳು ಸೆಲೀನಾ ಮೋಸಸ್.
https://www.instagram.com/reel/CnT5BspKG6F/?utm_source=ig_web_copy_link

