BREAKING NEWS: ಪಿಎಸ್ಐ ಪರೀಕ್ಷೆ ಅಕ್ರಮದ ಕ್ವೀನ್ ಪಿನ್ ದಿವ್ಯಾ ಹಾಗರಗಿಗೆ 11 ದಿನ ಸಿಐಡಿ ವಶಕ್ಕೆ

ಕಲಬುರ್ಗಿ: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ನಿನ್ನೆ ಸಿಐಡಿ ಪೊಲೀಸರು ಪ್ರಮುಖ ಕ್ವೀನ್ ಪಿನ್ ದಿವ್ಯಾ ಹಾಗರಗಿ ಸೇರಿದಂತೆ 7 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಇದೀಗ ಅವರಿಗೆ ನ್ಯಾಯಾಲಯವು 11 ದಿನ ಸಿಐಡಿ ಪೊಲೀಸರ ವಶಕ್ಕೆ ನೀಡಿದೆ.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯ ಕ್ವೀನ್ ಪಿನ್ ದಿವ್ಯಾ ಹಾಗರಗಿ ಸೇರಿದಂತೆ ಹಲವು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳನ್ನು ಪೊಲೀಸರು ಕಲಬುರ್ಗಿಯ 3ನೇ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.

ವಿಚಾರಣೆ ಬಾಕಿ ಇರೋ ಕಾರಣದಿಂದಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿತ್ತು. ಹೀಗಾಗಿ ಕೋರ್ಟ್ ದಿವ್ಯಾ ಹಾಗರಗಿ ಹಾಗೂ ಕಾಳಿದಾಸ್, ಸದ್ದಾಂ, ಜ್ಯೋತಿ, ಅರ್ಚನಾ, ಸುನೀತಾ, ಸುರೇಶ್ ಕಾಟೇಗಾಂವ್ ಸೇರಿದಂತೆ 7 ಮಂದಿಗೆ 11 ದಿನ ಸಿಐಡಿ ವಶಕ್ಕೆ ನೀಡಿದೆ.

About The Author