ಬೆಂಗಳೂರು: ಈಗಿನ ಆಧುನಿಕ ಯುಗದಲ್ಲಿ ಎಲ್ಲರು ವೇಗದ ಪ್ರಪಂಚದ ಹಿಂದೆ ಹೋಗುತ್ತಿರುವುದರಿಂದ ಯಾರಿಗು ಸಹ ತಿನ್ನಲು ಪುರಸೊತ್ತಿಲ್ಲವೆಂದು ಫಾಸ್ಟ ಪುಡ್ ಗಳ ಹಿಂದೆ ಬಿದ್ದಿದ್ದಾರೆ ದೇಶಿಯ ಆಹಾರ ಪದ್ದತಿಯನ್ನು ಮರೆಯುತ್ತಿರುವ ಕಾರಣ ಬೆಂಗಳೂರಿನ ಆನೆಕಲ್ ನ ಸರ್ಜಾಪುರದ ಹೊಟೆಲ್ ಒಂದರಲ್ಲಿ ಅತಿ ಹೆಚ್ಚು ರಾಗಿ ಮುದ್ದೆ ತಿಂದವರಿಗೆ ಬಹುಮಾನವನ್ನು ಆಯೋಜಿಲಾಗಿತ್ತು .
ಸರ್ಜಾಪುರದ ಗ್ರಾಮಸ್ತರು ಮತ್ತು ಮಂಥನ ಹೊಟೆಲ್ ಮಾಲಿಕರು ಸೇರಿ ರಾಗಿಮುದ್ದೆ ನಾಟಿಕೋಳಿ ಸಾರಿನ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ದೆಯಲ್ಲಿ ಬೆಂಗಳೂರಿನ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಕುಣಿಗಲ್ ಮಂಡ್ಯ ಮಾಲೂರು ಸೇರಿದಂತೆ ಭಾಗವಿಸಿದ್ದರು
ಸ್ಪರ್ದೇಯಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ ಒಂದು ಕುರಿ ಮತ್ತು ಎರಡು ಮೂರನೆ ಸ್ಥಾನ ಗೆದ್ದವರಿಗೆ ನಾಟಿಕೋಳಿಗಳನ್ನು ಬಹುಮಾನವಾಗಿ ಘೋಷಿಸಿದ್ದರು. ಇನ್ನು ಈ ಸ್ಪರ್ದೆಗೆ 200 ಪ್ರವೇಶ ಶುಲ್ಕವನ್ನು ನಿಗಧಿ ಮಾಡಲಾಗಿತ್ತುಬೆಂಗಳೂರಿನ ಮಹಾಲಕ್ಷ್ಮಿ ಲೇಓಟ್ ನ ಹರೀಶ್ ಎನ್ನುವ ಯುವಕ ಬರೋಬ್ಬರಿ 13 ರಾಗಿ ಮುದ್ದೆ ತಿಂದು ಮೊದಲ ಬಹುಮಾನ ಗೆದ್ದಿದ್ದಾರೆ.
Rocking Star Yash : ಮಲೇಷ್ಯಾದಲ್ಲಿ ಯಶ್ ಗೆ ಸಿಕ್ತು ಭಾರೀ ಉಡುಗೊರೆ…!