Sunday, September 8, 2024

Latest Posts

ರೇಬೀಸ್ ಅಧಿಸೂಚಿತ ಕಾಯಿಲೆ ಎಂದು ಘೋಷಣೆ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್

- Advertisement -

ಬೆಂಗಳೂರು: ರೇಬೀಸ್ ಕಾಯಿಲೆಯನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ರೇಬೀಸ್ ನಾಯಿ ಕಡಿತದಿಂದ ಬರುವ ಕಾಯಿಲೆಯಾಗಿದ್ದು, 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ. ಈ ಕ್ರಮದಿಂದ ರೇಬೀಸ್ ಪ್ರಕರಣಗಳ ವರದಿ ಮತ್ತು ಕಣ್ಗಾವಲು ವ್ಯವಸ್ಥೆ ಬಲಗೊಳ್ಳಲಿದ್ದು ರೇಬೀಸ್ ಅನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಜಿ-20 ಕೇವಲ ರಾಜತಾಂತ್ರಿಕ ಕಾರ್ಯಕ್ರಮವಲ್ಲ,ಇದು ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಒಂದು ಅವಕಾಶ : ಪ್ರಧಾನಿ ನರೇಂದ್ರ ಮೋದಿ

ರೇಬೀಸ್ ಪ್ರಾಣಿಗಳು (ನಾಯಿಗಳು )ಕಚ್ಚುವುದರಿಂದ ಹರಡುವ ಮಾರಣಾಂತಿಕ ವೈರಸ್ ರೋಗವಾಗಿದ್ದು, 2030ರೊಳಗೆ ಸಂಪೂರ್ಣವಾಗಿ ರೇಬೀಸ್ ಕಾಯಿಲೆಯನ್ನುನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರೇಬೀಸ್ ಅನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ ಎಂದು ಸಚಿವ ಡಾ ಸುಧಾಕರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನ ಉಪ ಸಾಮಾನ್ಯ ಸಲಹೆಗಾರ ಜೇಮ್ಸ್ ಬೇಕರ್ ವಜಾಗೊಳಿಸಿದ ಎಲಾನ್ ಮಸ್ಕ್

ಹೆಲ್ಮೆಟ್ ಧರಿಸದಿದ್ದರೆ ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯಿಂದ ಅಮಾನತು : ಎಸ್ಪಿ ಹರಿರಾಂ ಶಂಕರ್ ಖಡಕ್ ಎಚ್ಚರಿಕೆ

- Advertisement -

Latest Posts

Don't Miss