Saturday, April 19, 2025

Latest Posts

ಡಿಬಾಸ್ ಬಾಲ್ಯದ‌ ಫೋಟೋ ಹಂಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಹೇಳಿದ್ದೇನು…?

- Advertisement -

ಡಿಬಾಸ್ , ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಗಿಂದು ಹುಟ್ಟುಹಬ್ಬ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರುವ ದಾಸನಿಗೆ ಅಭಿಮಾನಿಗಳು ಸೇರಿದಂತೆ ಕನ್ನಡದ ಹಲವು ಸ್ಟಾರ್ಸ್ ಶುಭಾಶಯ ಕೋರಿದ್ದಾರೆ. ದಚ್ಚು ಕೈ ಹಿಡಿದು ನಡೆಸಿದವರು.. ಕಷ್ಟಕ್ಕೆ ಬೆನ್ನೆಲುಬಾದ ಡಿಬಾಸ್ ನೆನೆದು ಶುಭಾಶಯ ಕೋರಿದ್ದಾರೆ.

ಈ ಪೈಕಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಒಬ್ರು. ದಚ್ಚು ಬುಲ್ ಬುಲ್ ಸಿನಿಮಾ ಮೂಲಕ‌ ಕನ್ನಡ ಸಿನಿ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟ ರಚ್ಚು, ದಾಸನ ಬಾಲ್ಯದ ಅಪರೂಪದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಸ್ನೇಹ ಜೀವಿ..ಸರಳತೆ ಸಂಕೇತ…

ಸ್ನೇಹ ಜೀವಿ, ಸರಳತೆಯ ಸಂಕೇತ, ಅಭಿಮಾನಿಗಳ ಅಭಿಮಾನಿ ಡಿ ಬಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಸೋಷಿಯಲ್ ಮೀಡಿಯಾದಲ್ಲಿ ದಚ್ಚು ಹಳೆಯ ಫೋಟೋ ಹಾಕಿ ಶುಭ ಕೋರಿದ್ದಾರೆ.

ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ ಹೀರೋಯಿನ್ ಆಗಿ ಸಕ್ಸಸ್ ಪಡೆದ ರಚಿತಾ, ಆ ಬಳಿಕ ಅಂಬರೀಶ ಸಿನಿಮಾದಲ್ಲಿ ನಟಿಸಿದ್ದು. ಆ ನಂತ್ರ ಜಗ್ಗುದಾದಾ ಸಿನಿಮಾದಲ್ಲೂ ರಚಿತಾ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

- Advertisement -

Latest Posts

Don't Miss