Film News : ರಚಿತಾರಾಮ್ ಗುಳಿಕೆನ್ನೆ ಚೆಲುವೆ. ಮಳೆ ಅಂದ್ರೆ ತುಂಬಾನೆ ಇಷ್ಟ ಪಡೋ ನಟಿ. ಮಳೆ ಜೊತೆ ಆಟವಾಡುತ್ತಾ ಅಭಿಮಾನಿಗಳಿಗೆ ಸಖತ್ತಾಗಿಯೇ ಸಂತಸ ಪಡಿಸಿದ್ದಾರೆ ತಿಥಲೀ ಬ್ಯೂಟಿ. ಈ ನಟಿಯ ಆಟಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಏನೇನ್ ಹೇಳಿದ್ಧಾರೆ ಗೊತ್ತಾ ನೀವೆ ನೋಡಿ……
ಮಳೆ ಹನಿಯನ್ನ ಎಂಜಾಯ್ ಮಾಡುತ್ತಿರುವ ಡಿಂಪಲ್ ಕ್ವೀನ್ ತನ್ನ ಮೋಜಿನಾಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೊರಗಡೆ ತುಂತುರು ಮಳೆ ಸುರಿಯತ್ತಿದ್ದಾಗ ಅದಕ್ಕೆ ಕೈಯೊಡ್ಡಿ ನಿಂತಿರುವ ನಟಿ, ತಮಗೆ ಮಳೆಗಾಲ ಎಂದರೆ ತುಂಬಾ ಖುಷಿ ಎಂದಿದ್ದಾರೆ. ಆದರೆ ವಿಡಿಯೋದಲ್ಲಿ ಮಳೆ ಕಂಡು ಓಡಿ ಹೋಗಿದ್ದಾರೆ.
ಇದರಿಂದ ಅಭಿಮಾನಿಗಳು ತಮಾಷೆಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಮಳೆ ಹನಿಯನ್ನ ಕೈಯಲ್ಲಿ ಹಿಡಿಯಲು ನೋಡಿರುವ ವಿಡಿಯೋ ಹಂಚಿಕೊಂಡಿರುವ ರಚಿತಾ, ಮಳೆಯಲ್ಲಿ ನೆನೆಯಲು ಹೋಗಿ ಹೆದರಿ ವಾಪಸ್ ಓಡಿ ಬಂದಿದ್ದಾರೆ.
ಇದರಿಂದ ಫ್ಯಾನ್ಸ್ ನಟಿಯ ಕಾಲೆಳೆಯುತ್ತಿದ್ದಾರೆ. ಮಳೆ ಅಂದ್ರೆ ಇಷ್ಟ ಎಂದು ಬರೆದುಕೊಂಡಿದ್ದೀರಿ, ನೀರ್ ಬಿದ್ರೆ ಯಾಕ್ ಒಡ್ತೀರಾ ಅಂತಿದ್ದಾರೆ ಫ್ಯಾನ್ಸ್.
ಹಾಸ್ಯ ಕಾರ್ಯಕ್ರಮವೊಂದರಲ್ಲಿ ಜಡ್ಜ್ ಆಗಿರುವ ರಚಿತಾ ಅವರ ಫೇಮಸ್ ಡೈಲಾಗ್, ನಿಮ್ದು ಬರೀ ಇಂತದೇಯಾ ಎನ್ನೋದು. ಅದನ್ನೇ ಕೆಲವರು ತಮಾಷೆಯಾಗಿ ಕಮೆಂಟ್ನಲ್ಲಿ ಹಾಕಿದ್ದಾರೆ. ಇನ್ನು ಹಲವು ಫ್ಯಾನ್ಸ್ ಹಾರ್ಟ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿಸಿ ಖುಷಿಪಟ್ಟಿದ್ದಾರೆ.
Dharshan : ದರ್ಶನ್, ಕಾಲಿಗೆ ಏಟಾಗಿದ್ದರೂ ಯುಕೆ ಫ್ಲೈಟ್ ಏರಿದ್ದು ಯಾಕೆ ..?!
Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?