ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಬ್ಯೂಟಿ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಷಯದ ಸಲುವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ದಮಯಂತಿ’ ಸಿನಿಮಾ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಖತ್ ಆಕ್ಟಿವ್ ಆಗಿರ್ತಾರೆ. ತಮ್ಮ ಡೈಲಿ ಅಪ್ಡೇಟ್ಸ್ ಶೇರ್ ಮಾಡೋ ಮೂಲಕ ಫೋಟೊ, ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರ್ತಾರೆ. ಇದೀಗ ರಾಧಿಕಾ ಬೊಂಬಾಟ್ ಡ್ಯಾನ್ಸ್ ಮಾಡಿ ಜಾರಿ ಬಿದ್ದಿರೋ ವಿಡಿಯೋ ಫುಲ್ ವೈರಲ್ ಆಗಿದೆ.
20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಾಧಿಕಾ ಕುಮಾರಸ್ವಾಮಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. 2008ರಲ್ಲಿ ‘ನವಶಕ್ತಿ ವೈಭವ’ ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ನಂತರ ಮದುವೆ, ಮಗು ಅಂತ ಚಿತ್ರರಂಗದಿಂದ ಬ್ರೇಕ್ ತಗೊಂಡಿದ್ದರು.
2012ರಲ್ಲಿ ‘ಲಕ್ಕಿ’ ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿ ಬಣ್ಣದ ಲೋಕಕ್ಕೆ ಮತ್ತೆ ಬಂದ ಚೆಲುವೆ ಮರುವರ್ಷವೇ ‘ಸ್ವೀಟಿ’ ಚಿತ್ರದಲ್ಲಿ ನಟಿಸಿ ಗೆದ್ದರು. ನಂತರ ‘ಅವತಾರಂ’, ‘ರುದ್ರ ತಾಂಡವ’, ‘ದಮಯಂತಿ’, ‘ಕಾಂಟ್ರ್ಯಾಕ್ಟ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರಾಧಿಕಾ ಈಗ ಸೈಲೆಂಟ್ ಆಗಿಬಿಟ್ಟಿದ್ದಾರೆ.
2017ರಲ್ಲಿ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದರು. ಕ್ರೇಜಿ ಡ್ಯಾನ್ಸ್‌ನಿಂದ ವೀಕ್ಷಕರನ್ನು ರಂಜಿಸಿದ್ದರು. ಅದ್ರಂತೆ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ 2 ಇನ್‌ಸ್ಟಾಗ್ರಾಂ ಖಾತೆಗಳಿದ್ದು, ಸಾಕಷ್ಟು ಜನ ಫಾಲೋ ಮಾಡುತ್ತಿದ್ದಾರೆ.
ಈ ಖಾತೆಗಳಲ್ಲಿ ರಾಧಿಕಾ ಫೋಟೊಗಳು, ವಿಡಿಯೋಗಳು ಪೋಸ್ಟ್ ಆಗ್ತಾಯಿರುತ್ತೆ. ಆದ್ರೆ ಇದು ಅವರ ಅಫೀಶಿಯಲ್ ಇನ್‌ಸ್ಟಾಗ್ರಾಂ ಖಾತೆ ಹೌದೋ ಅಲ್ಲವೋ ಗೊತ್ತಿಲ್ಲ. ಸದ್ಯ ರಾಧಿಕಾ ಡ್ಯಾನ್ಸ್ ಮಾಡಿರೋ ಹೊಸದೊಂದು ವಿಡಿಯೋ ಸಖತ್ ಸೌಂಡ್ ಮಾಡ್ತಿದ್ದು, ಡ್ಯಾನ್ಸ್ ಮಾಡುವ ವೇಳೆ ಜಾರಿ ಬಿದ್ದಿದ್ದಾರೆ. ರಾಧಿಕಾ ಬೊಂಬಾಟ್ ಡ್ಯಾನ್ಸ್ ಮಾಡಿ ಜಾರಿ ಬಿದ್ದಿರೋ ವಿಡಿಯೋ ಫುಲ್ ವೈರಲ್ ಆಗಿದೆ.