- Advertisement -
www.karnatakatv.net: ಸ್ಯಾಂಡಲ್ ವುಡ್ ತಾರೆ ರಾಧಿಕಾ ಕುಮಾರಸ್ವಾಮಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದ್ರು. ಬಹುತೇಕ ಒಂದೇ ವರ್ಷದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಪ್ಪು ಮತ್ತು ರಾಧಿಕಾ ಈ ವರೆಗೂ ಅಪ್ಪು ಜೊತೆಯಲ್ಲಿ ಒಂದು ಸಿನಿಮಾದಲ್ಲೂ ನಟಿಸಿಲ್ಲ. ಇನ್ನು ಶಿವಣ್ಣ ಜೊತೆ ಅಣ್ಣ ತಂಗಿ ಚಿತ್ರದಲ್ಲಿ ನಟಿಸಿದ ಬಳಿಕ ರಾಧಿಕಾರಿಗೆ ರಾಜ್ ಕುಟುಂಬಸ್ಥರು ತೀರಾ ಹತ್ತಿರವಾಗಿದ್ದರು.
ಇನ್ನು ತಮ್ಮ ನಿರ್ಮಾಣದಲ್ಲಿ ಪುನೀತ್ ಜೊತೆ ಒಳ್ಳೆ ಸಿನಿಮಾ ಮಾಡಬೇಕು ಅಂತ ಕನಸು ಕಂಡಿದ್ದ ರಾಧಿಕಾ ಕುಮಾರಸ್ವಾಮಿ, ಕಳೆದ ವಾರವಷ್ಟೇ ಪುನೀತ್ ರಾಜ್ ಕುಮಾರ್ ರವರೊಂದಿಗೆ ಫೋನ್ ಮಾಡಿ ಮಾತನಾಡಿದ್ದಂತೆ. ಆದ್ರೆ ಎಲ್ಲಾ ಅಂದುಕೊoಡoತೆ ನಡೀಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರನ್ನು ಬಿಟ್ಟು ಎಲ್ಲವನ್ನೂ ತೊರೆದು ಬಾರದ ಲೋಕಕ್ಕೆ ತೆರಳಿದ್ದಾರೆ. ಹೀಗಾಗಿ ನಟಿ ರಾಧಿಕಾ ಕನಸು ಕನಸಾಗಿಯೇ ಉಳಿಯುವಂತಾಯ್ತು.
- Advertisement -