- Advertisement -
ಫ್ರಾನ್ಸ್ : ಈ ಬಾರಿಯ ಆಯುಧ ಪೂಜೆ ಭಾರತದ ಪಾಲಿಗೆ ಅವಿಸ್ಮರಣಿಯ. ಯಾಕಂದ್ರೆ ಭಾರತೀಯ ಸೇನೆಯ ಬತ್ತಳಿಕೆಗೆ ಶೀಘ್ರವೇ ಸೇರಲಿರುವ ರಫೇಲ್ ಯುದ್ಧ ವಿಮಾನಕ್ಕೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆಯ ಪ್ರಯುಕ್ತ ಪೂಜೆ ಸಲ್ಲಿಸಲಿದ್ರು. ಭಾರತಕ್ಕೆ ಮೊದಲೆಯನ ವಿಮಾನವಾಗಿ ಹಸ್ತಾಂತರವಾಗಲಿರುವ ರಫೇಲ್ ವಿಮಾನಕ್ಕೆ ಕುಂಕುಮ ಹೂ ಇಡುವುದರ ಜೊತೆಗೆ ವಿಮಾನದ ಮೇಲೆ ಓಂ ಅಂತ ಸ್ವತಃ ರಾಜನಾಥ್ ಸಿಂಗ್ ಬರೆದರು. ನಂತರ ರಫೇಲ್ ವಿಮಾನದ ಟಯರ್ ಗೆ ನಿಂಬೆ ಹಣ್ಣು ಇಟ್ಟು ವಿಮಾನದ ಚಕ್ರವನ್ನ ಹರಿಸಲಾಯ್ತು. ಒಟ್ಟಾರೆ ಆಯುಧ ಪೂಜೆಯಂದು ಭಾರತದ ಸೇನಾ ಬತ್ತಳಿಕೆ ಸೇರಲಿರುವ ಶಕ್ತಿ ಶಾಲಿ ರಫೇಲ್ ಪೂಜೆ ಈ ಬಾರಿಯ ವಿಶೇಷ ಅಂತ ಹೇಳಬಹುದು.
- Advertisement -