Vijayapura News: ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ದಾರ ತಾಲೂಕಿನ ಕೃಷ್ಣಾ ನದಿಯಲ್ಲಿ, ತೆಪ್ಪ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಿಗ್ಗೆಯಿಂದ ಶೋಧ ಕಾರ್ಯ ನಡೆದಿದ್ದು, ಅಗ್ನಿ ಶಾಮಕ ಸಿಬ್ಬಂದಿಗಳು ಮೂವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಳಿಗ್ಗೆಯಿಂದ ಇಲ್ಲಿಯವರೆಗೆ ಮೂವರ ಮೃತದೇಹ ಸಿಕ್ಕಿದ್ದು, ಇನ್ನುಳಿದ ಮೂವರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ನಿನ್ನೆ ದಿನ ಪುಂಡಲೀಕ ಯಂಕಂಚಿ (35) ಸಾವನ್ನಪ್ಪಿದ್ದಾನೆ. ಬೆಳ್ಳಿಗೆ,ಸೈಯಬ್ ಚೌದ್ರಿ,(42) ಮತ್ತು ಧಶರಥ ಸುಳಿಬಾವಿ (64)ಮೃತ ದೇಹ ಪತ್ತೆಯಾಗಿದ್ದು, ಇನ್ನು ಮೈಬೂಬ ವಾಲಿಕಾರ (31) ರಫೀಕ್ ಜಾಲಗಾರ (54) ಇನ್ನು ಇಬ್ಬರಿಗೂ ಶೋಧಕಾರ್ಯ ಆರಂಭವಾಗಿದೆ.
ಇನ್ನು ಈ ದುರ್ಘಟನೆ ನಡೆಯಲು ಕಾರಣವೇನು ಅಂದ್ರೆ, ಇವರೆಲ್ಲರೂ ತೆಪ್ಪದಲ್ಲಿ ಕುಳಿತು ಜೂಜಾಡುತ್ತಿದ್ದರು. ಇದೇ ವೇಳೆ ತೆಪ್ಪ ಮಗುಚಿ, ಎಲ್ಲರೂ ನೀರು ಪಾಲಾಗಿದ್ದಾರೆ. 8 ಜನರಲ್ಲಿ ಇಬ್ಬರೇ ಇಬ್ಬರು ಬದುಕಿ ದಡ ಸೇರಿದ್ದು, ಉಳಿದವರೆಲ್ಲರೂ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಜಾಪುರ, ಬೀಳಗಿ, ಜಮಖಂಡಿ, ಬಾಗಲಕೋಟೆ ಜಿಲ್ಲೆಯ 25ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧಕಾರ್ಯ ಮುಂದುವರಿದಿದೆ.




