Sunday, March 16, 2025

Latest Posts

ತುಂಗೆಯ ತಟದಲ್ಲಿ ಏಳು ದಿನ ಸಪ್ತ ರಾತ್ರೋತ್ಸವ.

- Advertisement -

www.karnatakatv.net : ರಾಯಚೂರು : ತುಂಗೆಯ ತಟದಲ್ಲಿರೋ ಶ್ರೀ ಗುರು ಸಾರ್ವಭೌಮ ರಾಘವೇಂದ್ರ ರಾಯರ  350 ನೇ ಆರಾಧನೆಯನ್ನ ಇದೇ ಅಗಸ್ಟ್ 21 ರಿಂದ 27 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಂತ್ರಾಲಯದಲ್ಲಿ ಸುಭುದೇಂದ್ರ ತೀರ್ಥರು ಸುದ್ದಿಗೋಷ್ಠಿ ನಡೆಸಿ, ಈ ಬಾರಿಯ ಆರಾಧನೆ ಹೇಗೆ ನಡೆಯಲಿದೆ ಎಂಬುದರ ಕುರಿತು ವಿವರಿಸಿದರು.

ರಾಯರು ಬೃಂದಾವನ ಸೇರಿ 350 ವರ್ಷವಾಗಿದ್ದು, ಆಗಸ್ಟ್ 21 ರಿಂದ ಏಳು ದಿನ ಸಪ್ತ ರಾತ್ರೋತ್ಸವ ನಡೆಯಲಿದೆ. ಈ  ಹಿನ್ನೆಲೆ ವಿಶೇಷ ಪೂಜೆ ಮಹಾಭಿಷೇಕ ನಡೆಯಲಿದೆ‌ ಎಂದರು. ಇದೇ ವೇಳೆ ಕೊರೊನಾ ಸಂಕಷ್ಟ ಗಮನದಲ್ಲಿಟ್ಟುಕೊಂಡು  ಅತ್ಯಂತ ಸರಳವಾಗಿ ಆರಾಧನ ಮಹೊತ್ಸವ ರೂಪಿಸಲಾಗಿದ್ದು,. ಕೊರೊನಾ ನಿಯಮಗಳಿಗೆ ಒಳಪಟ್ಟು ಎಲ್ಲಾ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದರು.

ಈ ಬಾರಿ ಆರಾಧನೆಯಲ್ಲಿ ರಾಯರ ದರುಶನಕ್ಕೆ ಬರುವ ಪ್ರತಿಯೊಬರಿಗೂ ಮಾಸ್ಕ್ ನೀಡಲಾಗುವುದು.‌ ಸ್ಯಾನಿಟೈಸರ ಮಾಡಲಾಗುವುದು. ಕೊವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ‌‌. ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಸ್ಥಾಪಿಸಲಾಗಿದೆ‌. ನದಿ ತೀರದಲ್ಲಿ ವಸತಿ ನಿಲಯ ಮಠದ ಆವರಣದಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ ಎಂದರು.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss