ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಈ ಹಿಂದೆ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ 2019ರಲ್ಲಿ ಪರಸ್ಪರ ಡಿವೋರ್ಸ್ ಪಡೆದು ದೂರಾಗಿದ್ದರು. ಆರು ವರ್ಷಗಳ ಬಳಿಕ ರಘು ದೀಕ್ಷಿತ್ ಎರಡನೇ ಮದುವೆಗೆ ನಿರ್ಧರಿಸಿದ್ದು, ಖ್ಯಾತ ಗಾಯಕಿ ಜೊತೆ ಹಸೆಮಣೆ ಏರುವುದು ಖಚಿತವಾಗಿದೆ.
ಬಹುಭಾಷಾ ಜಾನಪದ ಸಂಗೀತಕ್ಕೆ ಹೆಸರುವಾಸಿಯಾದ ಗಾಯಕ ರಘು ದೀಕ್ಷಿತ್, ಗ್ರ್ಯಾಮಿ-ನಾಮ ನಿರ್ದೇಶಿತ ಸಂಗೀತಗಾರ್ತಿ ಕೊಳಲು ವಾದಕಿ ವಾರಿಜಾಶ್ರೀ ವೇಣುಗೋಪಾಲ್ ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಉತ್ಸುಕರಾಗಿದ್ದಾರೆ. ಈ ಇಬ್ಬರು ಸಂಗೀತ ಕಲಾವಿದರ ಪ್ರೀತಿ ಪ್ರೇಮ ಪ್ರಣಯ ‘ಸಾಕು ಇನ್ನೂ ಸಾಕು’ ನಲ್ಲಿನ ಸಂಗೀತ ಸಹಯೋಗದೊಂದಿಗೆ ಪ್ರಾರಂಭವಾಯಿತು, ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್, ಈ ಹೊಸ ಆರಂಭವು ಅವರಿಗೆ ಆಳವಾದ ನೆಮ್ಮದಿಯನ್ನ ನೀಡಿದೆ. ನಾನು ನಿಜವಾಗಿಯೂ ಇದನ್ನ ನಿರೀಕ್ಷಿಸಿರಲಿಲ್ಲ. ನನ್ನ ಜೀವನದ ಉಳಿದ ಭಾಗವನ್ನ ಒಂಟಿಯಾಗಿ ಮತ್ತು ಏಕಾಂಗಿಯಾಗಿ ಕಳೆಯಲು ಸಿದ್ಧನಾಗಿದ್ದೆ. ಆದರೆ, ಜೀವನಕ್ಕೆ ಬೇರೆ ಯೋಜನೆಗಳಿದ್ದವು. ಬಲವಾದ ಸ್ನೇಹದಿಂದ ಆರಂಭವಾದದ್ದು ಸಹಜವಾಗಿಯೇ ಪ್ರೀತಿ ಮತ್ತು ಒಡನಾಟವಾಗಿ ಬೆಳೆಯಿತು. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ ನಾವು ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ಉತ್ಸುಕರಾಗಿದ್ದೇವೆ ಎಂದು ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ