- Advertisement -
ಬೆಂಗಳೂರು: ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲಕಾಪೂರೆ ಅವರನ್ನು ನೇಮಕ ಮಾಡಲಾಗಿದೆ.
ನಿನ್ನೆಯಷ್ಟೇ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದಂತ ಸ್ಥಾನಕ್ಕೆ, ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ನೇಮಕ ಮಾಡಲಾಗಿತ್ತು.
ನೂತನ ಸಭಾಪತಿಯಾಗಿ ನೇಮಕಗೊಂಡಂತ ಅವರು, ಇಂದು ವಿಧಾನಸೌಧದದ ಸಭಾಪತಿಗಳ ಕೊಠಡಿಯಲ್ಲಿ ನೂತನ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲಕಾಪೂರೆ ಅಧಿಕಾರ ಸ್ವೀಕರಿಸಿದರು.
- Advertisement -