Tuesday, September 16, 2025

Latest Posts

ಸಾಕಷ್ಟು ಗೋಲ್ಮಾಲ್‌ ನಡೆದಿದೆ : ರಾಗಾ ಹೇಳಿಕೆಗೆ ಡಿಕೆಶಿ ಸ್ಪೋಟಕ ಟ್ವಿಸ್ಟ್

- Advertisement -

ನವದೆಹಲಿ : ನಿನ್ನೆಯಷ್ಟೇ ರಾಜ್ಯದಲ್ಲಿಯ ಒಂದು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು‌ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಆದರೆ ನಾನು ಹೇಳಿರುವುದರಲ್ಲಿ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಶೇಕಡಾ 90ರಷ್ಟು ಅಲ್ಲ 100ಕ್ಕೆ ನೂರರಷ್ಟು ಗಟ್ಟಿಯಾಗಿ ಹೇಳುತ್ತೇನೆ ಎಂದು ಇಂದು ಮತ್ತೆ ತಮ್ಮ ಗಂಭೀರ ಆರೋಪವನ್ನು ಮುಂದುವರೆಸಿದ್ದಾರೆ,

ದೇಶದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಕಳ್ಳಾಟಗಳು ಮುಂದುವರೆದಿವೆ. ಚುನಾವಣೆಗಳು ಸರಿಯಾಗಿ ನಡೆಯುತ್ತಿಲ್ಲ. ಬಿಹಾರ ಮಾತ್ರವಲ್ಲ, ಮಹಾರಾಷ್ಟ್ರವಲ್ಲದೆ ಕರ್ನಾಟಕದಲ್ಲಿಯೂ ಒಂದು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಇದರ ಬಗ್ಗೆ ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.

ಇದನ್ನೂ ಓದಿ : ಸಿಎಂ ಬದಲಾವಣೆ ಕ್ಲೈಮ್ಯಾಕ್ಸ್‌ಗೆ ಟ್ವಿಸ್ಟ್‌!

ಈ ಸುದ್ದಿ ದೇಶಾದ್ಯಂತ ಬಿರುಗಾಳಿಯಂತೆ ಹಬ್ಬಿದೆ. ಈಗ ಒಬ್ಬೊಬ್ಬರಾಗಿ ಕಾಂಗ್ರೆಸ್‌ ನಾಯಕರು ಚುನಾವಣಾ ಅಕ್ರಮದ ಬಗ್ಗೆ ಮೌನ ಮುರಿಯುತ್ತಿದ್ದಾರೆ. ರಾಹುಲ್‌ ಗಾಂಧಿ ಲೋಕಸಭೆ ಹೊರಗೆ ಸಿಡಿಸಿರುವ ಈ ಎಲೆಕ್ಷನ್‌ ಸ್ಕ್ಯಾಮ್‌ನ ಬಾಂಬ್‌ ಪರಿಣಾಮ ದೇಶದಲ್ಲಿ ಹೆಚ್ಚಾಗುತ್ತಿದೆ.

ಅಂತೆಯೇ ರಾಜ್ಯದಲ್ಲೂ ಕೂಡ ಇದರ ಎಫೆಕ್ಟ್‌ ಜೋರಾಗುತ್ತಿದೆ, ದೇಶದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಸಚಿವ ಜಾರ್ಜ್‌ ಹೇಳಿಕೆ ನೀಡಿದ್ದರು. ಇದಾದ ಬಳಿಕ ಇದೀಗ ಡಿಕೆ ಶಿವಕುಮಾರ್‌ ಈ ಚುನಾವಣಾ ಕಳ್ಳಾಟದ ಬಗ್ಗೆ ಧ್ವನಿ ಎತ್ತಿದ್ದಾರೆ.

ಚುನಾವಣಾ ಅಕ್ರಮದ ಬಗ್ಗೆ ನಾನು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಒಪ್ಪುತ್ತೇನೆ. ನಾನು ಕೂಡ ಈ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತನಿಖೆ ನಡೆಸಿದ್ದೇನೆ. ಇಲ್ಲಿ ಹಲವಾರು ಗೋಲ್ಮಾಲ್ ಗಳು ನಡೆದಿವೆ. ಈ ಇದರ ಬಗ್ಗೆ ಸದ್ಯಕ್ಕೆ ನಾನು ಹೆಚ್ಚು ವಿಚಾರ ಚರ್ಚೆ ಮಾಡುವುದಿಲ್ಲ. ಮುಂದೆ ಈ ವಿಷಯವಾಗಿ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಡಿಕೆಶಿ ರಾಹುಲ್‌ ಗಾಂಧಿಯವರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಸದ್ಯ ರಾಜ್ಯದಲ್ಲಿಯ ಬೆಂಗಳೂರು ಲೋಕಸಭಾ ಕ್ಷೇತ್ರ ದೇಶಾದ್ಯಂತ ಗಮನ ಸೆಳೆಯುತ್ತಿದೆ. ನಿಜವಾಗಿಯೂ ಅಲ್ಲಿ ನಡೆದಿದ್ದಾದರೂ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಲು ಕಾರಣವಾಗಿದೆ.

ಇನ್ನೂ ಪ್ರಮುಖವಾಗಿ ರಾಹುಲ್‌ ಗಾಂಧಿ ಆರೋಪದ ಬಳಿಕ ಕರ್ನಾಟಕ ಟಿವಿಯೂ ಸಹ ಅನುಮಾನಿಸಿತ್ತು. ಈ ಕುರಿತು ವರದಿಯನ್ನೂ ಸಹ ಪ್ರಕಟಿಸಿತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಯೇ ಆಗಿರಬಹುದಾ? ಎಂದು ಪ್ರಶ್ನೆ ಎತ್ತಿತ್ತು. ಆದರೆ ಖುದ್ದು ಡಿಕೆ ಶಿವಕುಮಾರ್‌ ಹೇಳಿಕೆಯಿಂದ ಅದೀಗ ನಿಜವಾದಂತಾಗಿದೆ.

- Advertisement -

Latest Posts

Don't Miss