National News : ಮೊಣಕಾಲು ಸಂಬಂಧಿ ಸಮಸ್ಯೆಗಾಗಿ ರಾಹುಲ್ ಗಾಂಧಿ ಜುಲೈ 21 ರಂದು ಕೇರಳದ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದಾರೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಶಾಸಕ ಎಪಿ ಅನಿಲ್ ಕುಮಾರ್ ಜೊತೆಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆ ಬಳಿ ಇರುವ ಶ್ರೀ ವಿಶ್ವಂಭರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಪಿಎಸ್‌ವಿ ನಾಟ್ಯ ಸಂಘವು ಪ್ರದರ್ಶಿಸಿದ ‘ದಕ್ಷಯಜ್ಞ’ ಕಥೆಯನ್ನು ಆಧರಿಸಿದ ಕಥಕ್ಕಳಿ ಪ್ರದರ್ಶನ ವೀಕ್ಷಿಸಿದರು.
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಗಾಂಧಿ ಮಂಗಳವಾರ ಕೇರಳಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿಯೇ ಮೊಣಕಾಲು ಸಂಬಂಧಿತ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.
Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು
Crocodile : ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ದಂಡು : ಆತಂಕದಲ್ಲಿ ಸ್ಥಳೀಯರು