ಸಿಎಂ ಸಿದ್ದರಾಮಯ್ಯನವರ ಮುಂದೆ ರಾಹುಲ್ ಗಾಂಧಿ ಒಬ್ಬ ಬಚ್ಚಾ. ಅಂಥವನ ಭೇಟಿಗಾಗಿ ಗೇಟ್‌ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆ. ಅವರಿಗೆ ಈ ದೈನೇಸಿ ಸ್ಥಿತಿ ಬರಬಾರದಿತ್ತು. ಹೀಗಂತ ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ಹುಲಿಯಾಗಿದ್ದರು. ಈಗ ಇಲಿಯಾಗಿದ್ದಾರೆ. ಹಿಂದೆ ಇಂದಿರಾಗಾಂಧಿಯವರನ್ನೇ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಇಂದು ಅವರ ಮೊಮ್ಮಗನ ಪಾದ ಪೂಜೆ ಮಾಡಲು ಸಿದ್ಧವಾಗಿರುವುದು ನೋವಿನ ಸಂಗತಿ ಎಂದು ಟೀಕಿಸಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ಇದನ್ನು ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದ್ದಾರಾ? ಸಿದ್ದರಾಮಯ್ಯನವರಂತಹ ನಾಯಕರು ಇರುವಾಗ ನಾವು ದೇಶದೊಳಗೆ ಇಂತಹ ಪರಿಸ್ಥಿತಿಯನ್ನು ಎದುರಿಸಲೇಬೇಕು. ಅವರ ಸರ್ಕಾರದ ಯೋಗ್ಯತೆಗೆ ಜೈಲಿನಲ್ಲಿರುವ ಭಯೋತ್ಪಾದಕನನ್ನೇ ಬಿಗಿಯಾಗಿ ಇಡಲು ಆಗುತ್ತಿಲ್ಲ. ಇವರೇನು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದು ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ವಿದ್ಯಾವಂತ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿರುವುದು ಅತ್ಯಂತ ಅಪಾಯಕಾರಿ. ಮುಸ್ಲಿಮರ ಸಮಸ್ಯೆ ಬಡತನವಲ್ಲ. ಅವರೊಳಗಿನ ಧರ್ಮಾಂಧತೆಯೇ ನಿಜವಾದ ಸಮಸ್ಯೆ. ಟಾಂಗಾ ಸಾಬಿ, ಜಟ್ಕಾ ಸಾಬಿಗಿಂತ ವಿದ್ಯಾವಂತ ಮುಸ್ಲಿಮರ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ?
ಯುಪಿಎ ಸರ್ಕಾರದ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟಗಳಾಗಿದ್ದವು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದೊಳಗೆ ನಡೆದ ಮೊದಲ ದೊಡ್ಡ ಸ್ಫೋಟವಿದು. ಮೊದಲು ಪಾಕಿಸ್ತಾನದಿಂದ ಬಂದು ಬಾಂಬ್ ಇಡುತ್ತಿದ್ದರು. ಈಗ ನಮ್ಮ ದೇಶದೊಳಗಿನ ಮುಲ್ಲಾಗಳೇ ಇದಕ್ಕೆ ತಯಾರಾಗುತ್ತಿದ್ದಾರೆ. ದೇಶದ ಒಳಗಿನವರೇ ಬಾಂಬ್ ಇಡಲು ಮುಂದಾದರೆ ಮೋದಿ ತಡೆಯಲು ಸಾಧ್ಯವೇ? ಎಂದು, ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

